ಗುಂಡ್ಲುಪೇಟೆ: ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರಕ್ಕೆ ರಿಲ್ಯಾಕ್ಸ್ ಮಾಡಲು ಬಂದಿದ್ದ ಕುಟುಂಬವೊಂದು ಅಪಹರಣಕ್ಕೊಳಗಾದ ಪ್ರಕರಣ ಇದೀಗ ಸುಖಾಂತ್ಯಗೊಂಡಿದೆ.
ಬೆಂಗಳೂರು ಮೂಲದ ನಿಶಾಂತ್ ತನ್ನ ಪತ್ನಿ ಚಂದನಾ, 7 ವರ್ಷದ ಮಗನ ಜೊತೆ ಕಂಟ್ರಿ ಕ್ಲಬ್ ರೆಸಾರ್ಟ್‌ನಲ್ಲಿ ತಂಗಿದ್ದರು. ಸೋಮವಾರ ಮಧ್ಯಾಹ್ನ ಅಟ್ಯಾಕ್ ಮಾಡಿದ ಕಿಡ್ನಾಪರ್ಸ್ ಮಗು ಸಮೇತ ದಂಪತಿಯನ್ನು ಅಪಹರಿಸಿದ್ದರು. ಅಪಹರಣದ ಜಾಡು ಹಿಡಿದು ಬೆನ್ನತ್ತಿದ್ದ ಪೊಲೀಸರು ಸಿಸಿಟಿವಿ ಹಾಗೂ ಸಿಡಿಆರ್ ಮಾಹಿತಿ ಆಧರಿಸಿ 24 ತಾಸಲ್ಲೇ ದಂಪತಿ ಮತ್ತು ಮಗುವನ್ನು ರಕ್ಷಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ನಾಲ್ವರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.





