ಗುಂಡ್ಲುಪೇಟೆ : ಬಂಡೀಪುರದ ಕುಂದುಗೆರೆ ವಲಯದ ಜಮೀನೊಂದರಲ್ಲಿ ಕಾಡು ಪ್ರಾಣಿಗಳ ದಾಳಿ ತಡೆಗಟ್ಟಲು ರೇಜರ್ ಬ್ಲೇಡ್ ನಿಂದ ತಂತಿ ಬೇಲಿ ನಿರ್ಮಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಇದರ ತೆರವಿಗೆ ಪರಿಸರವಾದಿ ಜೋಸೆಪ್ ಹೂವರ್ ಆಗ್ರಹಿಸಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್ಗಳ ಹಾವಳಿಯಿಂದ ಕಂಗೆಟ್ಟಿದ್ದ ವನ್ಯಪ್ರಾಣಿಗಳಿಗೀಗ ರೇಜರ್ ಬ್ಲೇಡ್ ಸೋಲಾರ್ ಪೆನ್ಸಿಂಗ್ ಸಂಕಷ್ಟ ಎದುರಿಸುವಂತಾಗಿದೆ. ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮಂಗಲ ಗ್ರಾಮದ ಬಳಿ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ತರುವಂತಹ ಅಪಾಯಕಾರಿ ಬೇಲಿ ಅಳವಡಿಸಲಾಗಿದೆ. ಆಕಸ್ಮಾತ್ ವನ್ಯಪ್ರಾಣಿಗಳೇನಾದ್ರು ಬೇಲಿ ಪ್ರವೇಶಿಸುವ ಪ್ರಯತ್ನ ಮಾಡಿದರೆ ದೇಹವನ್ನು ಕತ್ತರಿಸುವಂತಹ ಬ್ಲೇಡ್ ಗಳನ್ನು ಅಳವಡಿಸಿರುವುದು ಕಂಡು ಬಂದಿದೆ. ಹೀಗಾಗಿ ಇದರ ತೆರವಿಗೆ ಪರಿಸರ ವಾದಿಗಳು ಆಗ್ರಹಿಸಿದ್ದಾರೆ.



