Mysore
24
scattered clouds

Social Media

ಶುಕ್ರವಾರ, 04 ಏಪ್ರಿಲ 2025
Light
Dark

ಚಾ.ನಗರ: ಅಕ್ರಮ ಮದ್ಯ ಮಾರಿದರೇ 1 ಲಕ್ಷ ರೂ. ದಂಡ

ಚಾಮರಾಜನಗರ: ಅಕ್ರಮ ಮದ್ಯ ಮಾರಾಟ ಮಾಡಿದರೆ 1ಲಕ್ಷ ರೂ. ದಂಡ ವಿಧಿಸುವುದಾಗಿ ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಗ್ರಾಮಸ್ಥರು ಸೋಮವಾರ ನಿರ್ಣಯ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟದಿಂದ ಗ್ರಾಮದ ಜನರು ಕುಡಿತದ ವ್ಯಸನಿಗಳಾಗಿ ತಮ್ಮ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ ಕಾರಣ ಅಕ್ರಮ ಮದ್ಯ ಮಾರಾಟ ನಿಲ್ಲಿಸುವ ಉದ್ದೇಶದಿಂದ ಊರಿನ ಗ್ರಾಮಸ್ಥರು ಈ ನಿರ್ಣಯ ಕೈಗೊಂಡಿದ್ದಾರೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುವವರಿಗೆ 1 ಲಕ್ಷ ರೂ ದಂಡ, ಮದ್ಯ ಮಾರಾಟದ ಸುಳಿವು ನೀಡಿದವರಿಗೆ 10 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ಗ್ರಾಮಸ್ಥರು ಘೋಷಿಸಿದ್ದಾರೆ.

ಇನ್ನು ಅಕ್ರಮ ಮದ್ಯ ಮಾರಾಟ ಮಾಡಿ ಜೈಲು ಸೇರಿದವನಿಗೆ ಜಾಮೀನು ಕೊಟ್ಟರೇ 2 ಲಕ್ಷ ರೂ. ದಂಡ ವಿಧಿಸುವುದಾಗಿ ನಿರ್ಧಾರ ಮಾಡಿದ್ದಾರೆ.

Tags: