ಚಾಮರಾಜನಗರ: ಬೈಕೊಂದು ಪಾದಾಚಾರಿ ವೃದ್ಧೆಗೆ ಡಿಕ್ಕಿಯಾಗಿ ಸವಾರ ಮತ್ತು ಪಾದಚಾರಿ ಇಬ್ಬರೂ ಅಸುನೀಗಿದ ಘಟನೆ ಚಾಮರಾಜನಗರ ತಾಲೂಕಿನ ಮರಿಯಾಲ ಬಳಿ ಶನಿವಾರ ನಡೆದಿದೆ.
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ರಾಜು(19) ಹಾಗೂ ಅಪರಿಚಿತ ವೃದ್ದೆ ಸಾವನ್ನಪ್ಪಿದ ದುರ್ದೈವಿಗಳು.
ರಾಜು ಬದನಗುಪ್ಪೆ ಕಾರ್ಖಾನೆ ಒಂದರಲ್ಲಿ ಕೆಲಸ ಮುಗಿಸಿ ವಾಪಾಸ್ ಆಗುವಾಗ ವೃದ್ಧೆಗೆ ಡಿಕ್ಕಿ ಹೊಡೆದು ತಾನು ಕೆಳಕ್ಕೆ ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ.