Mysore
17
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಸುನೀಲ್‌ ಬೋಸ್‌ಗೆ ಚಾಮರಾಜನಗರ ʼಲೋಕʼ ಟಿಕೆಟ್: ಏಪ್ರಿಲ್‌ ೩ಕ್ಕೆ ನಾಮಪತ್ರ ಸಲ್ಲಿಕೆ

ಚಾಮರಾಜನಗರ:  ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಚಿವ ಮಹದೇವಪ್ಪ ಅವರ ಪುತ್ರ ಸುನೀಲ್‌ ಬೋಸ್‌ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಏಪ್ರಿಲ್‌ ೩ ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಈ ಬಗ್ಗೆ ಮೈಸೂರು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧಿಕೃತ ಘೋಷಣೆ ಹೊರಡಿಸಿದೆ. ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರದ ವೇಳಾಪಟ್ಟಿಯನ್ನು ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದಿಂದ ಬಿಡುಗಡೆ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಆಗಿರುವ ಡಿಕೆ ಶಿವಕುಮಾರ್ ಅವರು ಪೂರ್ವಾನುಮತಿ ಪಡೆದು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮಾಂತರ ಜಿಲ್ಲಾ ಘಟಕ ಅಧ್ಯಕ್ಷ ಬಿ.ಜೆ ವಿಜಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾಮರಾಜನಗರ ಮೀಸಲು ಕ್ಷೇತ್ರದಿಂದ ಸಚಿವ ಮಹದೇವಪ್ಪ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ಸೂಚಿಸಿತ್ತು. ಅವರು ನಾನು ಸ್ಪರ್ಥಿಸುವುದಿಲ್ಲ.

ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದಿದ್ದರು. ಹೈಕಮಾಂಡ್ ಇದಕ್ಕೆ ಮಣಿದಿದೆ ಎನ್ನಲಾಗಿದೆ. ಸುನೀಲ್ ಬೋಸ್ ಗೆ ಟಿಕೆಟ್ ದೊರೆತಿರುವುದು ಹೈಕಮಾಂಡ್ ನಿಂದ ಅಧಿಕೃತವಾಗಿ ಪ್ರಕಟವಾಗಬೇಕಾಗಿದೆ.

ಅದಕ್ಕೂ ಮುನ್ನವೇ ಪ್ರಚಾರ ಹಾಗೂ ನಾಮಪತ್ರದ ವೇಳಾಪಟ್ಟಿ ಪ್ರಕಟ ಆಗಿರುವುದ ಕೂತುಹಲ ಮೂಡಿಸಿದೆ.

Tags:
error: Content is protected !!