ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಟಿ.ಸಿ.ಹುಂಡಿ ಗ್ರಾಮದ ಬಳಿ ಇರು ಹೈ-ಟೆನ್ನನ್ ವಿದ್ಯುತ್ ಕಂಬ ಏರಿ ಓರ್ವ ಯುವಕ ಮೃತಪಟ್ಟಿದ್ದಾನೆ.
ಕೊಳ್ಳೇಗಾಲ ತಾಲ್ಲೂಕಿನ ಟಿ.ಸಿ.ಹುಂಡಿ ಗ್ರಾಮದ ಬಳಿ ಇಂದು(ಮಾರ್ಚ್.18) ಇದೇ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿ (27) ಎಂಬ ಯುವಕನೇ ಮೃತ ದುರ್ದೈವಿಯಾಗಿದ್ದಾನೆ.
ಈತ ಇಂದು ಬೆಳಿಗ್ಗೆ ಹೈ-ಟೆನ್ನನ್ ವಿದ್ಯುತ್ ಲೈನ್ ಹಾದು ಹೋಗಿರುವ ವಿದ್ಯುತ್ ಕಂಬವನ್ನು ಏರಿ ಕುಳಿತಿದ್ದನು. ಬಳಿಕ ತನ್ನ ತಾಯಿ ಸಿದ್ದರಾಜಮ್ಮರನ್ನು ಕರೆಸುವಂತೆ ಕೇಳಿಕೊಂಡಾಗ ಅವರನ್ನು ಗ್ರಾಮಸ್ಥರು ಕರೆತಂದಿದ್ದರು.
ತನ್ನ ತಾಯಿ ಬಂದ ಕೂಡಲೇ ಯಾರಾ ಮನವೊಲಿಕೆಗೂ ಜಗ್ಗದೆ ವಿದ್ಯುತ್ ಲೈನ್ ಅನ್ನು ಹಿಡಿದು ಕ್ಷಣಮಾತ್ರದಲ್ಲಿ ಅಸುನೀಗಿರುವ ಘಟನೆ ನಡೆದಿದೆ.





