ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗದ ಅರಣ್ಯದಂಚಿನ ಸೋಲಿಗ ಬುಡಕಟ್ಟು ಕುಟುಂಬಗಳಿಗೆ ʻಸೂರುʼ ಒದಗಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಹೌದು.. ಇಂದಿಗೂ ಬಹುತೇಕ ಸೋಲಿಗರು ಜೋಪಡಿಗಳಲ್ಲಿ ವಾಸಿಸುತ್ತಿದ್ದು, ಇವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ವಿಶೇಷ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ. ವಿಶೇಷ ಯೋಜನೆಯಡಿ 2995ಮನೆ ನಿರ್ಮಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಇನ್ನೂ ಇದೇ ಸೋಲಿಗರಿಗೆ ಮನೆ ನಿರ್ಮಿಸುವ ಚಿಂತನೆ ನಡೆಸಿದ್ದ ಜಿಲ್ಲಾಡಳಿತ ಈ ಹಿಂದೆ ಸರ್ವೆ ಕಾರ್ಯ ಕೂಡ ನಡೆಸಿತ್ತು. ಈ ವೇಳೆ 243 ಕುಟುಂಬಗಳಿಗೆ ಮನೆ ಜೊತೆಗೆ ನಿವೇಶನ ಇಲ್ಲದಿರುವುದು ಕಂಡು ಬಂದಿತ್ತು. ಇಂಹತ ಕುಟುಂಬಗಳಿಗೆ ನಿವೇಶನದ ಜೊತೆಗೆ ಮನೆ ನಿರ್ಮಿಸಿ ಜಿಲ್ಲಾಡಳಿತ ತೀರ್ಮಾನಿಸಿದೆ.
ಈ ಯೋಜನೆಯಡಿ ಪ್ರತಿ ವಸತಿಗೆ 5ಲಕ್ಷದಂತೆ 3ಸಾವಿರ ಮನೆಗಳಿಗೆ 150 ಕೋಟಿ ರೂ. ಅಂದಾಜು ವೆಚ್ಚ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮಹತ್ವ ಕಾರ್ಯಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹ ಕೈಜೋಡಿಸಿದ್ದಾರೆ. ಸರ್ಕಾರ ಅನುಮೋದನೆ ಕೊಟ್ಟರೆ ಜಿಲ್ಲಾಡಳಿತ ಈ ಯೋಜನೆಗೆ ʻಸಿದ್ದು ನಿವಾಸʼ ಯೋಜನೆ ಎಂದು ಹೆಸರಿಡಲೂ ಕೂಡ ಚಿಂತಿಸಿದೆ.
ಒಟ್ಟಾರೆ…. ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುವ ಸೋಲಿಗರಿಗೆ ಸೂರು ಒದಗಿಸಲು ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಅಸ್ತು ಎನ್ನಲಿದೆಯೇ ಎಂದು ಕಾದು ನೋಡಬೇಕಿದೆ.





