Mysore
17
broken clouds

Social Media

ಶುಕ್ರವಾರ, 30 ಜನವರಿ 2026
Light
Dark

ಚಾಮರಾಜನಗರ| ಹಸೆಮಣೆಯಿಂದ ನೇರವಾಗಿ ಪರೀಕ್ಷೆಗೆ ಹಾಜರಾದ ನವವಧು

Chamarajanagar Newlywed bride

ಚಾಮರಾಜನಗರ: ತಾಳಿ ಕಟ್ಟಿದ ಮರುಕ್ಷಣವೇ ನವವಧು ಪರೀಕ್ಷೆಗೆ ಹಾಜರಾಗಿ, ಶಿಕ್ಷಣದ ಮಹತ್ವ ಸಾರುವ ಕೆಲಸ ಮಾಡಿದ್ದಾರೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಈ ಪ್ರಸಂಗ ನಡೆದಿದ್ದು, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ಯೋಗೇಶ್‌ ಜೊತೆ ಕೊಳ್ಳೇಗಾಲದ ಸಂಗೀತ ವಿವಾಹವು ಇಂದು ನಿಶ್ಚಯವಾಗಿತ್ತು.

ಕೊಳ್ಳೇಗಾಲ ಪಟ್ಟಣದ ಕಲ್ಯಾಣ ಮಂಟಪದಲ್ಲಿ ವಿವಾಹ ನೆರವೇರಿತು. ಅಂತಿಮ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಸಂಗೀತ ಇಂದು ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಮೂಲಕ ಮದುವೆ ಸಂಭ್ರಮದ ನಡುವೆಯೂ ಶಿಕ್ಷಣದ ಮಹತ್ವ ಸಾರುವ ಕೆಲಸ ಮಾಡಿದ್ದಾರೆ.

Tags:
error: Content is protected !!