Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಚಾಮರಾಜನಗರ: ಶಾಲಾ ಪೀಠೋಪಕರಣಗಳ ಮೇಲೆ ದಾಳಿ ಮಾಡಿದ ಕರಡಿ

ಚಾಮರಾಜನಗರ : ಆಹಾರ ಪದಾರ್ಥ ಅರಸಿ ನಾಡಿನಿಂದ ಕಾಡಿಗೆ ಬಂದ ಕರಡಿಯೊಂದು ಶಾಲಾ ಶಿಕ್ಷಕರ ಕೊಠಡಿಯ ಬಾಗಿಲು ಮುರಿದು, ಆಃಆರ ಪದಾರ್ಥಗಳನ್ನು ತಿಂದು ಜೊತೆಗೆ ಪೀಠೋಪಕರಣಗಳನ್ನು ಮುರಿದು ಹಾಕಿರುವ ಘಟನೆ ಹನೂರು ತಾಲೂಕಿನ ಸಂದನಪಾಳ್ಯದ ಸಂತ ಅಂಥೋಣಿ ಗ್ರಾಮಾಂತರ ಫ್ರೌಢ ಶಾಲೆಯಲ್ಲಿ ಮಧ್ಯರಾತ್ರಿ ನಡೆದಿದೆ.

ಇಂದು(ಶುಕ್ರವಾರ) ಬೆಳಿಗ್ಗೆ ಮುಖ್ಯ ಶಿಕ್ಷಕ ಲೂಯಿಸ್‌ ಸೇನಸ್‌ ಅವರು ಶಾಲೆಗೆ ಬಂದಾಗ ಶಿಕ್ಷಕರ ಕೊಠಡಿಯ ಬಾಗಿಲು ಮುರಿದಿರುವುದನ್ನು ನೋಡಿದ್ದಾರೆ. ಒಳ ಹೋಗಿ ನೋಡಿದಾ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿದ ಮುಖ್ಯ ಶಿಕ್ಷಕರು ಸಿಸಿ ಟಿವಿಯಲ್ಲಿ ಕರಿಡಿ ದಾಂಧಲೆ ನಡೆಸಿರುವುದು ಗೊತ್ತಾಗಿದೆ.

ತಡರಾತ್ರಿ ಸುಮಾರು ೧ ಗಂಟೆ ವೇಳೆಯಲ್ಲಿ ಕರಡಿಯೊಂದು ರೂಂ ಬಾಗಿಲು ಮುರಿದು ಒಳನುಗ್ಗಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕರಡಿ ಒಳನುಗ್ಗಿ ಅಡುಗೆ ಎಣ್ಣೆ, ಬೆಲ್ಲ ಇತ್ಯಾದಿ ಪದಾರ್ಥಗಳನ್ನು ತಿಂದು ಪೀಠೋಪಕರಣಗಳಿಗೆ ಹಾನಿ ಮಾಡಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಫಾದರ್‌ ಟೆನ್ನಿ ಕುರಿಯನ್‌ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಲವು ದಿನಗಳ ಹಿಂದೆ ಅಜ್ಜಿಪುರ ಗ್ರಾಮದಲ್ಲಿನ ಅಂಗಡಿಯೊಂದಕ್ಕೆ ನುಗ್ಗಿದ್ದ ಕರಡಿ ಮೊಟ್ಟೆಗಳನ್ನು ತಿಂದು ಹಾಳು ಮಾಡಿತ್ತು. ಈ ಕರಡಿಯನ್ನು ಸೆರೆಹಿಡಿದು ಕಾಡಿಗೆ ಬಿಡಲಾಗಿತ್ತು. ಇದಾದ ಬಳಿಕವೂ ಈ ಘಟನೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

https://x.com/JafarSwadiq3/status/1735552783846178963?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ