Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಚಾ.ನಗರ | ಹೆಜ್ಜಾಲ-ಚಾ.ನಗರ ರೈಲು ಮಾರ್ಗಕ್ಕೆ ಸುನೀಲ್‌ ಬೋಸ್‌ ಮನವಿ

ಚಾಮರಾಜನಗರ: ಹೆಜ್ಜಾಲದಿಂದ ಚಾಮರಾಜನಗರಕ್ಕೆ ರೈಲು ಮಾರ್ಗ ಕಲ್ಪಿಸಬೇಕು ಎಂದು ಸಂಸದ ಸುನಿಲ್ ಬೋಸ್ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ಈ ಹಿಂದೆ ಬೆಂಗಳೂರಿನಿಂದ ಸತ್ಯಮಂಗಲದ ವರೆಗೆ (ಒಟ್ಟು 260 ಕಿ.ಮೀ.) ಪ್ರಸ್ತಾಪಗೊಂಡಿದ್ದ ಈ ಮಾರ್ಗವು ಮುಂದೆ ತಮಿಳುನಾಡು ಸರ್ಕಾರವು ಸತ್ಯ ಮಂಗಲ ಪ್ರದೇಶದಲ್ಲಿ ಸರ್ವೆ ಮಾಡಲು ಅವಕಾಶ ನೀಡದ ಕಾರಣ 2013-14ಲ್ಲಿ ಕೆಂಗೇರಿಯಿಂದ ಚಾಮರಾಜನಗರಕ್ಕೆ ರೈಲು ಮಾರ್ಗವನ್ನು ಗುರುತಿಸಲಾಯಿತು.

ಆದರೆ ಈ ಸರ್ವೆ ಮಾರ್ಗದಲ್ಲಿ ಅರಣ್ಯ ಪ್ರದೇಶ ಬಂದ ಕಾರಣ ಇದೀಗ ಸರ್ವೆ ಮಾರ್ಗವನ್ನು ಹೆಜ್ಜಾಲದಿಂದ ಗುರುತಿಸಲಾಗಿದ್ದು ಇದು ಕನಕಪುರ – ಮಳವಳ್ಳಿ -ಯಳಂದೂರು ಮಾರ್ಗವಾಗಿ ಚಾಮರಾಜನಗರ ತಲುಪಲಿದೆ. ಇದೊಂದು ಬಹು ನಿರೀಕ್ಷಿತ ಯೋಜನೆ ಆಗಿದ್ದು ಇದರಿಂದ ಬಹಳಷ್ಟು ಜನರಿಗೆ ಅನುಕೂಲ ಆಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

 

Tags: