ಕೊಳ್ಳೇಗಾಲ: ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆಯೊಬ್ಬರು ಅಪಘಾತಕ್ಕೆ ಒಳಗಾಗಿದ್ದ ಕಾರು ಬಿಡುಗಡೆಗೆ ಲಂಚ ಸ್ವೀಕರಿಸಿದ ವಿಡಿಯೋ ಸಾವಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಮಂಡ್ಯ ಮೂಲದ ಮನೋಹರ್ ಎಂಬವರ ಕಾರು ಮಾರ್ಚ್.೨೪ ರಂದು ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಬಳಿ ಅಪಘಾತಕ್ಕೆ ಈಡಾಗಿತ್ತು. ಇದನ್ನು ಬಿಡಿಸಿಕೊಳ್ಳಲು ಮಾರ್ಚ್ ೨೭ರಂದು ಕಾರಿನ ಮಾಲೀಕ ಮನೋಹರ್ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿದ್ದರು.
ಈ ವೇಳೆ ಪೊಲೀಸ್ ಪೇದೆ ವಿಜಯಕುವಾರ್ ಕಾರು ಬಿಡುಗಡೆಗೆ ಮೊದಲು ೧೦ ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ನಡೆದ ನಂತರ ೬ ಸಾವಿರ ರೂ. ಪಡೆದು ಕಾರು ಬಿಡುಗಡೆ ಮಾಡಿದ್ದರು.
ಸಬ್ ಇನ್‌ಸ್ಪೆಕ್ಟರ್‌ಗೆ ಇದರಲ್ಲಿ ಪಾಲು ನೀಡಬೇಕು. ಕಡಿಮೆ ನೀಡಿದರೆ ಅವರು ಒಪ್ಪಲ್ಲ. ಅವರು ಹೇಳಿದ್ದನ್ನು ನಾನು ನಿಮಗೆ ಹೇಳಿದ್ದೇನೆ ಎನ್ನುವುದು ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸಂಬಂಧ ಮನೋಹರ್ ಪೊಲೀಸ್ ಕಾನ್‌ಸ್ಟೇಬಲ್ ವಿಜಯಕುವಾರ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರಿಗೆ ದೂರು ನೀಡಿ, ಹಣ ವಸೂಲಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.