ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ವಾಸ್ತವ್ಯಕ್ಕಾಗಿ ಶೇ 70ರಷ್ಟು ಮುಂಗಡ ಬುಕಿಂಗ್ (ಆನ್ಲೈನ್) ಮಾಡಲು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಂಡಿದ್ದು ಭಕ್ತಾದಿಗಳು ಇದರ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಸತಿಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಈ ಹಿಂದೆಯೂ ಮಂಗಡ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ತಾಂತ್ರಿಕ ದೋಷದಿಂದ ಕೆಲವು ತಿಂಗಳ ಕಾಲ ಸ್ಥಗಿತವಾಗಿತ್ತು. ಇದೀಗ ಶೇ 70ರಷ್ಟು ಮುಂಗಡ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದ್ದು ಪ್ರತಿಯೊಬ್ಬರು ವಸತಿಗೃಹಗಳನ್ನು ಮುಂಗಡವಾಗಿಯೇ ಬುಕ್ ಮಾಡಿಕೊಳ್ಳಬಹುದು ಇದರಿಂದ ಸಮಯ ಉಳಿತಾಯವಾಗಲಿದೆ, ಉಳಿದಂತೆ ಶೇ 30ರಷ್ಟು ಮಾಹಿತಿ ಕೇಂದ್ರಕ್ಕೆ ತೆರಳಿ ವಸತಿಗೃಹಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದ ಜೇನುಮಲೆ, ಶಿವ ದರ್ಶಿನಿ, ಸೂರ್ಯ ದರ್ಶಿನಿ, ಶೈಲ ಭವನ, ಗುರುದರ್ಶಿನಿ, ಮಹದೇಶ್ವರ ಭವನ, ಯಾತ್ರಿ ನಿವಾಸ, ಡಾರ್ಮೆಟರಿ, ನಾಗಮಲೆ ಭವನಗಳಲ್ಲಿ https://mmhillsresevation.com ವೆಬ್ ಸೆಟ್ ಮುಖಾಂತರ ಮುಂಗಡ ಬುಕಿಂಗ್ ಮಾಡಿಕೊಳ್ಳಬಹುದು ಎಂದು ಕಾರ್ಯದರ್ಶಿ ಎಈ ರಘು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





