Mysore
26
few clouds

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಬಿಳಿಗಿರಿರಂಗನ ಬೆಟ್ಟ: ಬಸ್‌ ಪಲ್ಟಿ; 16ಕ್ಕೂ ಹೆಚ್ಚು ಮಂದಿಗೆ ಗಾಯ

ಚಾಮರಾಜನಗರ: ಇಲ್ಲಿನ ಬಿಳಿಗಿರಿರಂಗ ಬೆಟ್ಟದಿಂದ ಪೂಜೆ ಮುಗಿಸಿ ಹಿಂತಿರುಗುತಿದ್ದ ಖಾಸಗಿ ಬಸ್‌ ಪಲ್ಟಿಯಾಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು(ಜೂ.1) ಮೈಸೂರು ಜಿಲ್ಲೆಯ ನಂಜೂನಗೂಡು ಮೂಲದ ಕುಟುಂಬವೊಂದು ಪೂಜೆಗಾಗಿ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಿತ್ತು. ಪೂಜೆ ಮೂಗಿಸಿ ಹಿಂತಿರುವಾಗ ಗವಿಬೋರೆ ಹತ್ತಿರ ಬಸ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ. ಘಟನೆಯಲ್ಲಿ 16ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್‌ ಪಲ್ಟಿಯಾಗುತ್ತಿದ್ದಂತೆ ಬಸ್‌ ಚಾಲಕ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಯಳಂದೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಳಂದೂರು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!