ಕೊಳ್ಳೇಗಾಲ : ತಾಲ್ಲೂಕಿನ ಸರಗೂರು- ಚೆಲುವನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನ ಬೈಕ್ ಸವಾರ ರಮೇಶ್ ಹಾಗೂ ಪಾದಚಾರಿಗಳಾದ ಚೆಲುವನಹಳ್ಳಿ ಗ್ರಾಮದ ರೇವಮ್ಮ, ಕಿನಕಹಳ್ಳಿ ಬಸವಣ್ಣ ಹಾಗೂ ಗೀತಾ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ರಮೇಶ್‌ನನ್ನು ಚಾ.ನಗರ ಆಸ್ಪತ್ರೆಗೆ ಕಳುಹಿಸಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ವಿಚಾರ ತಿಳಿದ ಹನೂರು ಬಿಜೆಪಿ ಮುಖಂಡ ಹಾಗೂ ಯುವ ಉದ್ಯಮಿ ನಿಶಾಂತ್ ರವರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.





