ಕೊಳ್ಳೇಗಾಲ : ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಕೆರೆ ಸುತ್ತಲು ಅಳವಡಿಸಿರುವ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರಿಗೆ ಗಂಭೀರ ಗಾಯವಾಗಿರುವ ಘಟನೆ ಇಂದು(ಮೇ.09) ರಾತ್ರಿ ಜರುಗಿದೆ.
ತಾಲ್ಲೂಕಿನ ಕಾಮಗೆರೆ ವಿಶ್ವ ಹಾಗೂ ಪವನ್ ಎನ್ನುವರು ಕೊಳ್ಳೇಗಾಲದಿಂದ ಕಾಮಗೆರೆ ಹೋಗುವಾಗ ಕೆರೆ ಸುತ್ತಲೂ ಹಾಕಿರುವ ತಡಗೋಡೆ ಡಿಕ್ಕಿಯಾದ ಪರಿಣಾಮ ಇಬ್ಬರಿಗೂ ಮುಖದ ಭಾಗ ಹಾಗೂ ಕಾಲು ಗಂಭೀರ ಗಾಯವಾಗಿದೆ.
ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಕೊಳ್ಳೇಗಾಲ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





