ಚಾಮರಾಜನಗರ: ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿ ಕರಡಿ ಮೃತಪಟ್ಟಿರುವ ಘಟನೆ ಹನೂರು ಸಮೀಪದ ಅಜ್ಜೀಪುರ ಅರಣ್ಯದಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದ ತಾಯಿ ಕರಡಿಯಿಂದ ಬೇರ್ಪಟ್ಟಿದ್ದ ಆರು ತಿಂಗಳ ಕರಡಿ ಮರಿಯು ಅಜ್ಜೀಪುರ ರಸ್ತೆಯಲ್ಲಿ ಅಸ್ವಸ್ಥಗೊಂಡು ಕಲ್ಲುಗಳ ನಡುವೆ ಸೇರಿಕೊಂಡಿತ್ತು.
ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮರಿ ಕರಡಿಯನ್ನು ತಾಯಿಯ ಜೊತೆ ಸೇರಿಸಲು ಪ್ರಯತ್ನ ಮಾಡಿದ್ದರು. ಆದರೆ, ತಾಯಿ ಕರಡಿ ಸಿಗುವಷ್ಟರಲ್ಲಿ ಮರಿ ಕರಡಿ ಮೃತಪಟ್ಟಿದೆ.