Mysore
23
clear sky

Social Media

ಭಾನುವಾರ, 12 ಏಪ್ರಿಲ 2026
Light
Dark

ಕರ್ತವ್ಯ ಮುಗಿಸಿ ಮನೆಗೆ ಬಂದಾಗಲೇ ಹೃದಯಾಘಾತ: ಎಎಸ್‌ಐ ಸಾವು

ಚಾಮರಾಜನಗರ: ಕರ್ತವ್ಯ ಮುಗಿಸಿ ಮನೆಗೆ ಬದ ತಕ್ಷಣ ಹೃದಯಾಘಾತ ಸಂಭವಿಸಿ ಎಎಸ್‌ಐ ಮೃತಪಟ್ಟಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.

ನಾಗನಾಯಕ ಎಂಬುವವರೇ ಹೃದಯಾಘಾತಕ್ಕೆ ಬಲಿಯಾಗಿರುವ ಎಎಸ್‌ಐ ಆಗಿದ್ದಾರೆ.

ಸಂತೇಮರಳ್ಳಿ ಪೊಲೀಸ್‌ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಗನಾಯಕ ಅವರು ರಾತ್ರಿ ಡ್ಯೂಟಿ ಮುಗಿಸಿ ಮುಂಜಾನೆ ಮನೆಗೆ ವಾಪಸ್‌ ಆಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಿತಾದರೂ ಮಾರ್ಗ ಮಧ್ಯೆಯೇ ನಾಗನಾಯಕ ಕೊನೆಯುಸಿರೆಳೆದಿದ್ದಾರೆ.

 

Tags:
error: Content is protected !!