Mysore
16
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಕೊಳ್ಳೇಗಾಲ| ಸಿಡಿಮದ್ದು ಹಾಕಿ ಪ್ರಾಣಿ ಬೇಟೆಯಾಡುತ್ತಿದ್ದ ಆರೋಪಿ ಬಂಧನ

ಕೊಳ್ಳೇಗಾಲ: ಸಿಡಿಮದ್ದು ಹಾಕಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದೊಡ್ಡಿಂದುವಾಡಿ ಗ್ರಾಮದ ಸುಂದರ್ ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಇತ್ತೀಚೆಗೆಯಷ್ಟೆ ಈತ ನಾಡ ಬಂದೂಕು ಮೂಲಕ ಮೊಲ ಬೇಟೆಯಾಡಿ ಸಹಚರರೊಂದಿಗೆ ಬಂಧನಕ್ಕೆ ಒಳಪಟ್ಟಿದ್ದ. ಅಲ್ಲದೇ ಕೆಲವು ದಿನಗಳ ಹಿಂದೆ ಕೊತ್ತನೂರು ಅರಣ್ಯ ಪ್ರದೇಶದಲ್ಲಿ ಸಿಡಿಮದ್ದು ಹಾಕಿ ಕರಡಿವೊಂದು ಸಾವಿಗೀಡಾದ ಆರೋಪದಲ್ಲೂ ಸಹಾ ಈತನ ಹೆಸರಿದೆ. ಖಚಿತ ಮಾಹಿತಿ ಮೇರೆಗೆ ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:
error: Content is protected !!