Mysore
20
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಹನೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣೆ

ಹನೂರು: ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ತಾಲೂಕಿನ ವಿವಿಧಡೆ ಬಾಬಾ ಸಾಹೇಬರ ಸ್ಮರಣೆಯನ್ನು ಮಾಡಲಾಯಿತು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಮೂರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು.

ಈ ವೇಳೆ ಮಾತನಾಡಿದ ಮೂರ್ತಿ ಜಗತ್ತು ಕಂಡ ಶ್ರೇಷ್ಠ ಮಹಾ ಮಾನವತವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಅನೇಕ ಕ್ಷೇತ್ರಕ್ಕೆ ಗಣನೀಯ ಸೇವೆ ಮತ್ತು ಕೊಡುಗೆಯನ್ನು ನೀಡಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶ ಹಾಗೂ ಆಧುನಿಕ ಭಾರತದ ನಿರ್ಮಾಣಕ್ಕೆ ನೀಡಿರುವ ಸಂವಿಧಾನದ ಕೊಡುಗೆ ಅನನ್ಯ ಮತ್ತು ಅವಿಸ್ಮರಣೆಯಾದದ್ದು. ಶೋಷಿತರು ದೀನದಲಿತರಲ್ಲದೇ ಸರ್ವ ಜನಾಂಗದ ಹಿತಕ್ಕಾಗಿ ಶ್ರಮಿಸಿದ ಮಹಾ ನಾಯಕ ಭೀಮ್ ರಾವ್ ಅಂಬೇಡ್ಕರ್ ಅವರ ತತ್ವ ಆದರ್ಶಗಳು ಅನುಕರಣೆಯ ಎಂದರು.

ಪಟ್ಟಣದ ತಹಸೀಲ್ದಾರ್ ಕಚೇರಿ, ಉಪ ನೋಂದಣಾಧಿಕಾರಿ,ತಾಲೂಕು ಪಂಚಾಯಿತಿ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಬಾಬಾ ಸಾಹೇಬರ ಭಾವಚಿತ್ರವನ್ನು ಇಟ್ಟು ಗೌರವ ಪೂರ್ವಕವಾಗಿ ಪುಷ್ಪ ನಮನ, ಗೌರವ ನಮನ ಸಲ್ಲಿಸಿ ಪೂಜಿಸಲಾಯಿತು.

ಈ ಸಂದರ್ಭದಲ್ಲಿ ಪಪಂ ಸದಸ್ಯರುಗಳಾದ ಹರೀಶ್, ಸೋಮಶೇಖರ್, ದ್ವಿತೀಯ ದರ್ಜೆ ಸಹಾಯಕ ಮಾದೇಶ್, ಆರೋಗ್ಯ ನಿರೀಕ್ಷಕ ಬಾಲಸುಬ್ರಮಣ್ಯಂ, ಕಂದಾಯ ನಿರೀಕ್ಷಕ ಮಂಜುನಾಥ್, ಅಕೌಂಟೆಂಟ್ ದೇವಿಕಾ,ಕಚೇರಿ ನಿರ್ವಾಹಕ ಮದನ್, ಪ್ರತಾಪ್ ಜೂನಿಯರ್ ಪ್ರೋಗ್ರಾಮರ್ ನಾಗೇಂದ್ರ ಸಿಬ್ಬಂದಿಗಳಾದ ಶರತ್, ಶ್ರೀನಿವಾಸ್, ರಾಕೇಶ್, ಸುಷ್ಮಾ ಇನ್ನಿತರರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!