ಚಾಮರಾಜನಗರ: ಸಂವಿಧಾನ ದಿನವಾದ ಇಂದು ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಹರೀಶ್ ಕುಮಾರ್ ಅವರನ್ನು ಮದುವೆಯಾಗುತ್ತಿದ್ದಾರೆ. ಇವರ ವಿವಾಹವು ಮೈಸೂರಿನಲ್ಲಿ ಮಂತ್ರ ಮಾಂಗಲ್ಯದ ಮೂಲಕ ನಡೆಯಲಿದೆ. ಇನ್ನು ವಿಶೇಷ ಎಂದರೆ ಇವರ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪುರವರ ಭಾವಚಿತ್ರಗಳನ್ನು ಹಾಕುವ ಮೂಲಕ ಇನ್ನಿತರರಲ್ಲಿ ವೈಚಾರಿಕತೆ ಮೂಡಿಸುವ ಕೆಲಸ ಮಾಡಿದ್ದಾರೆ.
ಸಾಹಿತಿ ಕುಂ.ವೀರಭದ್ರಪ್ಪ ಮಂತ್ರ ಮಾಂಗಲ್ಯ ಬೋಧಿಸಲಿದ್ದು, ಯಾವುದೆ ಅನಗತ್ಯ ಆಡಂಬರ ಬೇಡ, ಸರಳವಾಗಿ ಮತ್ತು ವೈಚಾರಿಕಾವಗಿ ಸಂವಿಧಾನದ ದಿನ ಮಂತ್ರ ಮಾಂಗಲ್ಯದ ಮೂಲಕ ವಿವಾಹವಾಗುತ್ತಿದ್ದೇವೆ ಎಂದು ಎಡಿಸಿ ಗೀತಾ ಹುಡೇದಾ ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.





