Mysore
17
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ವ್ಯಾಪಾರ ವಿಶ್ಲೇಷಣೆಯಲ್ಲಿ ಸಾಧನೆ: ಶಶಿಕುಮಾರಿಗೆ ವರ್ಷದ ಮಹಿಳಾ ಉದ್ಯಮಿ ರಾಷ್ಟ್ರ ಪ್ರಶಸ್ತಿ

ಕೊಳ್ಳೇಗಾಲ : ತಾಲೂಕಿನ ಕಾಮಗೆರೆ ಗ್ರಾಮದ ಕುಮಾರಿ ಶಶಿಕುಮಾರಿ ಬೆಂಗಳೂರಿನ ಪ್ರತಿಷ್ಠಿತ ಆರ್.ಎಸ್ ಡೇವಲಪರ್ಸ್ ಎಂಬ ಕಂಪನಿಯಲ್ಲಿ ವ್ಯಾಪಾರ ವಿಶ್ಲೇಷಕಿಯಾಗಿ ಆರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದೂ ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆ ಸಾಧನೆಗಾಗಿ ಅವರಿಗೆ ವರ್ಷದ ಮಹಿಳಾ  ಉದ್ಯಮಿ ಪ್ರಶಸ್ತಿ ಲಭಿಸಿದೆ.

ಭಾರತದಲ್ಲೇ ಆರ್ ಎಸ್ ವಹಿವಾಟು ಸಂಬಂಧವಾಗಿ ಮಹಿಳೆಯರ ಕ್ಷೇತ್ರದಲ್ಲಿ ಕುಮಾರಿ ಶಶಿಕುಮಾರಿ ರವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ತಮಿಳು ಚಿತ್ರನಟಿ ಶ್ರೇಯ ಶರಣ್ ರವರು ಶಶಿಕುಮಾರಿ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಶಶಿಕುಮಾರಿ ರವರ ತಾಯಿ ಮತ್ತು ಅಣ್ಣ ಅವರ ಜೊತೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸದರು. ಗ್ರಾಮೀಣ ಭಾಗದಿಂದ ತೆರಳಿ ಪಟ್ಟಣದಲ್ಲಿ ಉತ್ತಮ ಸಾಧನೆಗೈದು ರಾಷ್ಟ್ರ ಪ್ರಶಸ್ತಿಗೆ ಬಾಜನರಾಗಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ಕುಮಾರಿ ಶಶಿಕುಮಾರಿಯ ಸಾಧನೆಗೆ ತಮ್ಮ ಬಂಧುಬಳಗ ಮತ್ತು ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!