Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಾಜ್ಯದಲ್ಲಿ 9 ತಿಂಗಳಿನಲ್ಲಿ 59 ಆನೆಗಳ ಸಾವು: ಚಾಮರಾಜನಗರದಲ್ಲೇ ಅತೀ ಹೆಚ್ಚು ಸಾವು

ಚಾಮರಾಜನಗರ: ರಾಜ್ಯದಲ್ಲಿ ಈ ವರ್ಷದ ಜನವರಿಯಿಂದ ಇದುವರೆಗೆ 59 ಆನೆಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

ಇವುಗಳಲ್ಲಿ 50 ಆನೆಗಳು ಸಹಜವಾಗಿ ಸಾವನ್ನಪ್ಪಿದ್ದು, 9 ಆನೆಗಳು ಅಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

ಅದರಲ್ಲೂ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಈ ವರ್ಷ ಆನೆಗಳ ಸಾವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದರ ಜೊತೆಗೆ ಕೊಡಗಿನಲ್ಲಿ 22, ಮೈಸೂರು ಜಿಲ್ಲೆಯಲ್ಲಿ 4, ಚಿಕ್ಕಮಗಳೂರು ಜಿಲ್ಲೆಯಲ್ಲಿ 5, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಜಿಲ್ಲೆಯಲ್ಲಿ ತಲಾ ಒಂದು ಆನೆ ಮೃತಪಟ್ಟಿದೆ.

ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲೇ ಅತಿ ಹೆಚ್ಚು ಆನೆಗಳು ವಾಸ ಮಾಡುತ್ತಿವೆ. ಈ ಸಾಲಿನ ಗಣತಿ ಪ್ರಕಾರ ರಾಜ್ಯದ ಎಲ್ಲಾ ಅರಣ್ಯಗಳಲ್ಲಿ ಒಟ್ಟು 6395 ಆನೆಗಳಿದ್ದು, ಇವುಗಳ ಪೈಕಿ 2877 ಆನೆಗಳು ಚಾಮರಾಜನಗರ ಜಿಲ್ಲೆಯ ಅರಣ್ಯಗಳಲ್ಲಿವೆ.

Tags: