ಚಾಮರಾಜನಗರ : ಜಿಲ್ಲೆಯ ಹರದನಹಳ್ಳಿ, ಹಂಗಳ, ದೊಡ್ಡಿಂದುವಾಡಿ, ಮಾರ್ಟಳ್ಳಿ ಹಾಗೂ ಕೆಸ್ತೂರು ಗ್ರಾಮಗಳನ್ನು ಸೌರ ಸ್ಪರ್ಧಾ ಗ್ರಾಮಗಳೆಂದು ಗುರುತಿಸಲಾಗಿದೆ.
ಈ ಗ್ರಾಮಗಳನ್ನು ಕೇಂದ್ರ ಸರ್ಕಾರದ ಪ್ರತಿಷ್ಠಿತ ಮಾದರಿ ಸೌರ ಗ್ರಾಮ ಯೋಜನೆಯಡಿ ಸ್ಪರ್ಧಾ ಗ್ರಾಮಗಳೆಂದು ಗುರುತಿಲಾಗಿದೆ. ಅಂತಿಮವಾಗಿ, ಆಯ್ಕೆಯಾದ ಗ್ರಾಮಕ್ಕೆ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ೧ ಕೋಟಿ ರೂ. ಪ್ರೋತ್ಸಾಹ ಧನ ಲಭಿಸಲಿದ್ದು ಮೈಸೂರಿನ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಸಮಿತಿ (ಡಿಎಲ್‌ಸಿ) ಸಭೆಯಲ್ಲಿ ಈ ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ.
ನವೀಕರಿಸಬಹುದಾದ ಇಂಧನ ಬಳಕೆಯ ಉತ್ತೇಜನ, ಮನೆಗಳಿಗೆ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಅಡಿಯಲ್ಲಿ ಮೇಲ್ಚಾವಣಿ ಸೌರಶಕ್ತಿ ಅಳವಡಿಕೆ ,ಇತರ ಗ್ರಾಹಕರಿಗೆ ಸಬ್ಸಿಡಿ ರಹಿತ ಯೋಜನೆಯಡಿಯಲ್ಲಿ ಚಾವಣಿ ಸೌರಶಕ್ತಿ ಅಳವಡಿಕೆಗೆ ಪ್ರೋತ್ಸಾಹ, ನೀರಾವರಿ ಪಂಪ್‌ಸೆಟ್‌ಗಳಿಗೆ ಪಿಎಂ-ಕುಸುಮ್ ಯೋಜನೆ ಅಡಿಯಲ್ಲಿ ಅನುಷ್ಠಾನ, ಸರ್ಕಾರಿ ಕಟ್ಟಡಗಳ ಮೇಲೆ ಸೌರಶಕ್ತಿ ಅಳವಡಿಕೆ, ಕುಡಿಯುವ ನೀರು ಮತ್ತು ಬೀದಿ ದೀಪಗಳಿಗೆ ಸೌರಶಕ್ತಿ ಬಳಕೆಗೆ ಸಂಬಂಽಸಿದಂತೆ ಈ ಐದು ಗ್ರಾಮಪಂಚಾಯಿತಿ ಮಟ್ಟದಲ್ಲಿ ಸ್ಪರ್ಧೆ ನಡೆಯಲಿದೆ.
ಈ ಸ್ಪರ್ಧೆಯು ಪ್ರಸಕ್ತ ವರ್ಷದ ಡಿ. ೩೧ರವರೆಗೆ ನಡೆಯಲಿದ್ದು ಸ್ಪರ್ಧೆಯ ಅಂತ್ಯದಲ್ಲಿ ಮೌಲ್ಯಮಾಪನದ ಆಧಾರದ ಮೇಲೆ ಗರಿಷ್ಠ ನವೀಕರಿಸಬಹುದಾದ ಇಂಧನ ಬಳಸಿದ ಗ್ರಾಮವನ್ನು ಮಾದರಿ ಸೌರ ಗ್ರಾಮವೆಂದು ಘೋಷಿಸಲಾಗುತ್ತದೆ. ಆಯ್ಕೆಯಾದ ಗ್ರಾಮಕ್ಕೆ ನವೀಕರಿಸಬಹುದಾದ ಇಂಧನ ಸಚಿವಾಲಯದ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಜಿಲ್ಲಾಽಕಾರಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





