Mysore
24
broken clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ಚಾಮರಾಜನಗರ| ಫ್ಲೋರೈಡ್‌ ಮಿಶ್ರಿತ ನೀರು ಸೇವಿಸಿ ಕಿಡ್ನಿ ಕಳೆದುಕೊಂಡ 47 ಜನ

ಚಾಮರಾಜನಗರ: ಫ್ಲೋರೈಡ್‌ ಮಿಶ್ರಿತ ನೀರು ಕುಡಿದು 47 ಮಂದಿ ಕಿಡ್ನಿ ಕಳೆದುಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಹಾಗೂ ಸುಳ್ವಾಡಿ ಗ್ರಾಮದಲ್ಲಿ ಫ್ಲೋರೈಡ್‌ ಮಿಶ್ರಿತ ನೀರು ಪೂರೈಕೆಯಾಗಿದ್ದು, ನೀರನ್ನು ಸೇವಿಸಿದ 47 ಜನರ ಕಿಡ್ನಿ ವೈಫಲ್ಯವಾಗಿದೆ.

ಅಲ್ಲದೇ ಗ್ರಾಮದ ಹಲವು ಜನರು ವಿವಿಧ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ ಅಂತರ್ಜಲ ನೀರಿನ ಮಟ್ಟ ಕಡಿಮೆಯಾಗಿದ್ದು, ನೀರಿನಲ್ಲಿ ಫ್ಲೋರೈಡ್‌ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. 47 ಜನರು ಕಿಡ್ನಿ ಕಳೆದುಕೊಂಡಿದ್ದು, ಹಲವರು ಹೈಪರ್‌ ಟೆನ್ಶನ್‌, ಥೈರಾಯ್ಡ್‌, ಸಂದಿವಾತ ಸೇರಿದಂತೆ ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ.

 

Tags:
error: Content is protected !!