ಕೊಳ್ಳೇಗಾಲ : ಇಲ್ಲಿನ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿ ಎಣಿಕೆ ನಡೆದಿದ್ದು, ಒಟ್ಟು 21,78,740 ರೂ. ನಗದು, 2 ಗ್ರಾಂ ಚಿನ್ನ, 8 ಗ್ರಾಂ ಬೆಳ್ಳಿ ಪದಾರ್ಥ ಸಂಗ್ರಹವಾಗಿದೆ.
ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಆದಿಶಕ್ತಿ ಮಾರಮ್ಮ ದೇವಸ್ಥಾನಗಳ ಹುಂಡಿ ಎಣಿಕೆ ಕಾರ್ಯದಲ್ಲಿ ಪಾಳ್ಯ ಉಪತಹಸಿಲ್ದಾರ್ ವಿಜಯ್ ಕುಮಾರ್, ರಾಜಸ್ವ ನಿರೀಕ್ಷಕರಾದ ರಂಗಸ್ವಾಮಿ, ನಿರಂಜನ್, ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ಗ್ರಾಮ ಲೆಕ್ಕಿಗರು, ದೇವಸ್ಥಾನದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಗ್ರಾಮಾಂತರ ಠಾಣೆಯ ಪೊಲೀಸರ ಭದ್ರತೆಯಲ್ಲಿ ಎಣಿಕೆ ಕಾರ್ಯ ನಡೆಯಿತು.





