ಚಾಮರಾಜನಗರ: ವಿಷಪೂರಿತ ಸೊಪ್ಪು ತಿಂದು 12 ಮೇಕೆಗಳು ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಗ್ರಾಮದಲ್ಲಿ ನಡೆದಿದೆ.
ಮೇಯಿಸಲು ಜಮೀನಿಗೆ ಹೋಗಿದ್ದ ವೇಳೆ 50 ಮೇಕೆಗಳ ಪೈಕಿ 12 ಮೇಕೆಗಳು ಸಾವನ್ನಪ್ಪಿವೆ.
ಗ್ರಾಮದ ಸೋಮಣ್ಣ ಹಾಗೂ ಶಾರದ ಎಂಬುವವರ ಮೇಕೆಗಳು ಇವಾಗಿದ್ದು, ಮೇಕೆಗಳನ್ನು ಕಳೆದುಕೊಂಡು ಇಬ್ಬರು ತೀವ್ರ ಕಂಗಾಲಾಗಿದ್ದಾರೆ.
ಘಟನೆಯಲ್ಲಿ ಇನ್ನೂ ಮೂರು ಮರಿಗಳು ಕೂಡ ಚಿಂತಾಜನಕವಾಗಿವೆ. ಅವುಗಳು ಬದುಕುವುದು ತೀರ ಅನುಮಾನ ಎನ್ನುವಂತಾಗಿದೆ.
ಈ ಘಟನೆಯಿಂದ ಆತಂಕದಲ್ಲಿರುವ ಗ್ರಾಮಸ್ಥರು ಸೂಕ್ತ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.