Mysore
22
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಚಾಮರಾಜನಗರ : ಪೊಲೀಸ್ ಕಾನ್ಸ್‌ಟೇಬಲ್  ಸಾವಿಗೆ ಯತ್ನ

ಚಾಮರಾಜನಗರ : ನಗರದ ಗ್ರಾಮಾಂತರ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್ ಹೆಚ್.ಆರ್ ಮಹೇಶ್ ಎಂಬುವವರು ಸಾವಿಗೆ ಯತ್ನಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಅವರನ್ನು ಹನೂರು ಠಾಣೆಗೆ ವರ್ಗಾವಣೆ ಮಾಡಿ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಗಳು ವರ್ಗಾವಣೆ ಮಾಡಿದ್ದರು. ಜತೆಗೆ, ಇತರ ಠಾಣೆಗಳ 7 ಮಂದಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.ವರ್ಗಾವಣೆಯಿಂದ ಮನನೊಂದು ಈ ಯತ್ನ ಮಾಡಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

ಸಾವಿಗೆ ಯತ್ನಿಸಿದ ಮಹೇಶ್‌ ರವರ ಕೈ- ಕಾಲು, ಪಕ್ಕೆಲುಬುಗಳಲ್ಲಿ ಸುಟ್ಟಗಾಯಗಳಾಗಿದ್ದು ಸದ್ಯ ಅವರನ್ನು ಚಿಕಿತ್ಸೆಗಾಗಿ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಎಸ್​ಪಿ ಶಿವಕುಮಾರ್ ರವರು ಮಹೇಶ್‌ ರವರು ಯಾವ ಕಾರಣಕ್ಕಾಗಿ ಸಾವಿಗೆ ಯತ್ನಿಸಿದ್ದಾರೆಂಬುದರ ಬಗ್ಗೆ ತಿಳಿದಿಲ್ಲ, ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!