Mysore
14
overcast clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಚಾ. ನಗರ : ಮಳೆ ಹಾನಿಯಿಂದ ನೊಂದ ಕುಟುಂಬಗಳಿಗೆ ರೈತ ಮುಖಂಡರಿಂದ ಪರಿಹಾರ ವಿತರಣೆ

ಚಾಮರಾಜನಗರ : ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಮಳೆ ಹಾನಿಯಿಂದ ನೊಂದ ಕುಟುಂಬಗಳಿಗೆ ಬಿಜೆಪಿ ಹಾಗೂ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ಅವರು ತಲಾ ೫ ಸಾವಿರ ರೂ ಪರಿಹಾರ ವಿತರಿಸಿದರು.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಸತತವಾಗಿ ೩ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜ್ಯೋತಿ ಗೌಡನಪುರ ವ್ಯಾಪ್ತಿಯ ಹಲವಾರು ಕೆರೆ ಕಟ್ಟೆಗಳು ಕೋಡಿ ಬಿದ್ದು ಗ್ರಾಮ ಜಲದಿಗ್ಭಂಧನವಾಗಿತ್ತು. ಹಲವಾರು ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿಸಿದ್ದರು. ಮಳೆಯಿಂದ ಹಾನಿಗೊಳಗದ ಸ್ಥಳಗಳಿಗೆ ಬಿಜೆಪಿ ಹಾಗೂ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ರವರು ಭೇಟಿ ನೀಡಿ, ತೀವ್ರ ಸಂಕಷ್ಟ ಅನುಭವಿಸುತ್ತಿರುವ ಪ್ರತಿ ಕುಟುಂಬಗಳಿಗೆ ತಲಾ ೫ ಸಾವಿರ ರೂ ನಂತೆ ಸುಮಾರು ೧೫ ಕುಟುಂಬಗಳಿಗೆ ೭೫ ಸಾವಿರ ರೂಗಳ ಧನ ಸಹಾಯ ಮಾಡಿದರು.

ಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಸುಂದರ್, ಗ್ರಾ.ಪಂ ಸದಸ್ಯರಾದ ನಿಂಗನಾಯಕ, ಕೃಷ್ಣನಾಯಕ, ವೆಂಕಟೇಶ್ ನಾಯಕ, ಭೂಮಿಕಾ, ಮಂಜು, ದೊರೆಸ್ವಾಮಿ,
ಸಾಗರ್ ಎಂ, ರಾಘವೇಂದ್ರ, ಪ್ರಸನ್ನ, ಹಾಗೂ ಇತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!