ಚಾಮರಾಜನಗರ: ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಾವಿ, ಕೊಳವೆಬಾವಿ ಕೊರೆಸಲು ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ಅಂತರ್ಜಲ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಅಂತರ್ಜಲ ಸಂಪನ್ಮೂಲ ಮೌಲೀಕರಣ ಮಾರ್ಚ್-೨೦೧೭ ರನ್ವಯ ಗುಂಡ್ಲುಪೇಟೆ ತಾಲೂಕನ್ನು ಅಂತರ್ಜಲ ಅತೀಬಳಕೆ ತಾಲ್ಲೂಕು ಎಂದು ಅಧಿಸೂಚಿಸಲಾಗಿದ್ದು, ಅಂತರ್ಜಲ ಬಳಕೆ ಇದೇ ರೀತಿ ಮುಂದುವರಿದರೆ ಅಂತರ್ಜಲದ ಕೊರತೆಯನ್ನು ತೀವ್ರವಾಗಿ ಎದುರಿಸಬೇಕಾಗಿರುವ ನಿಟ್ಟಿನಲ್ಲಿ ಅಧಿಸೂಚಿತ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಾವಿ, ಕೊಳವೆಬಾವಿ ಕೊರೆಯಲು ಹಾಗೂ ಅಂತರ್ಜಲ ಬಳಸಲು ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು ಹಾಗೂ ಪ್ರಸ್ತುತ ಇರುವ ಬಾವಿ, ಕೊಳವೆಬಾವಿಗಳನ್ನು ಸಹ ನೋಂದಾಯಿಸಿಕೊಳ್ಳಬೇಕು.
ಅನುಮತಿ, ನೋಂದಣಿ, ನಿರಾಕ್ಷೇಪಣಾ ಪತ್ರ ಪಡೆಯಲು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂತರ್ಜಲ ಕಚೇರಿ ದೂ.ಸಂ. ೦೮೨೨೬-೨೨೫೨೮೮ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.





