Mysore
15
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಡೋಲಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಹೊತ್ತೊಯ್ದ ಜನ…

ಹನೂರು : ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವನನ್ನು ಡೋಲಿ ಮೂಲಕ ಆಸ್ಪತ್ರೆಗೆ ದಾಖಲು ಮಾಡಿರುವ ಘಟನೆ ಜರುಗಿದೆ.

ತಾಲೂಕಿನ ದೊಡ್ಡಾಣಿ ಗ್ರಾಮದ ಮಹದೇವ್( 62) ವರ್ಷದ ರವರಿಗೆ ಕಳೆದ ಆರು ತಿಂಗಳದಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಇವರನ್ನು ಪ್ರತಿ ಬಾರಿಯೂ ಡೋಲಿ ಮುಖಾಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಗುರುವಾರ ಮಧ್ಯಾಹ್ನ ತೀವ್ರ ಅಸ್ವಸ್ಥರಾದ ಕಾರಣ ಡೋಲಿಯಲ್ಲಿಯೇ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷಗಳೆ ಕಳೆದರು ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಸಾರಿಗೆ ವ್ಯವಸ್ಥೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪ್ರಾಧಿಕಾರದವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಕಾಡಂಚಿನ ಗ್ರಾಮಗಳ ರಸ್ತೆ ತಲೆಗೆಟ್ಟಿರುವುದರಿಂದ 108 ತುರ್ತು ವಾಹನ ತೆರಳಲು ಸಾಧ್ಯವಾಗುತ್ತಿಲ್ಲ ಇದರಿಂದ ಇಲ್ಲಿಯ ರೋಗಿಗಳು ನರಕ ಅನುಭವಿಸುವಂತಾಗಿದೆ. ಗರ್ಭಿಣಿಯರನ್ನು ಆಸ್ಪತ್ರೆಗೆ ಡೋಲಿಯಲ್ಲಿ ಕರೆ ತರುವ ವೇಳೆ ಮಾರ್ಗ ಮಧ್ಯದಲ್ಲಿಯೇ ಹೆರಿಗೆಯೂ ಆಗಿದೆ. ಕೆಲವರು ಮಾರ್ಗ ಮಧ್ಯದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಇಷ್ಟಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೊಡ್ಡಣೆ ಗ್ರಾಮಸ್ಥರು ಆರೋಪಿಸಿದ್ದಾರೆ.

ಆಶ್ರಯವಾಗಿದ್ದ ಜನವನ : ಈ ಹಿಂದೆ ಮೆಂದಾರೆ,ತುಳಸಿಕೆರೆ, ಇಂಡಿಗನತ್ತ, ಪಡಸಲನತ್ತ, ಮೆದಗನಾಣೆ, ಪಾಲಾರ್, ದೊಡ್ಡಣೆ, ತೊಕೆರೆ, ಕೊಕ್ಕಬರೆ ಗ್ರಾಮಗಳಿಗೆ 3 ಜನ ವನ ವಾಹನ ಬಿಡಲಾಗಿತ್ತು. ಇದೀಗ ಕಳೆದ ಎರಡು ತಿಂಗಳಿನಿಂದ ರಸ್ತೆ ಹದಗೆಟ್ಟಿರುವುದರಿಂದ ಹಾಗೂ ಚಾಲಕರಿಗೆ ಸಂಬಳ ನೀಡದೆ ಇರುವುದರಿಂದ ವಾಹನ ನಿಲುಗಡೆಯಾಗಿದೆ. ಇಂಡಿಗನತ್ತ ಗ್ರಾಮದ ರಸ್ತೆಯನ್ನು ದುರಸ್ತಿ ಪಡಿಸಲಾಗುತ್ತಿದೆ ಅರಣ್ಯ ಇಲಾಖೆಯವರು ಚಾಲಕನನ್ನು ನೇಮಕ ಮಾಡಿದರೆ ಈ ಮಾರ್ಗವಾಗಿ ಜನಮನ ವಾಹನ ಪ್ರಾರಂಭ ಮಾಡುತ್ತೇವೆ ಎಂದು ಇಡಿಸಿ ಅಧ್ಯಕ್ಷ ತೊಳಸಿಕೆರೆ ಕೆಂಪ್ಪಣ್ಣ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.


ಹಿಂದಿನ ಡಿ ಎಫ್ಒ ರವರು ಕಾಡಂಚಿನ ಗ್ರಾಮಗಳ ಜನರ ಅನುಕೂಲಕ್ಕಾಗಿ ಜನವನ ವಾಹನವನ್ನು ಬಿಟ್ಟಿದ್ದರು. ಇದೀಗ ಅರಣ್ಯ ಇಲಾಖೆಯವರು ಜನವನ ವಾಹನವನ್ನು ನಿಲ್ಲಿಸಿರುವುದರಿಂದ ತೀವ್ರ ತೊಂದರೆ ಆಗಿದೆ. ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಬೇಕು.

ಕುಮಾರ್
ಮಹಾದೇವರ ಮಗ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!