Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚರ್ಮಗಂಟು ರೋಗ ನಿಯಂತ್ರಣಕ್ಕೆ ಜಾನುವಾರುಗಳಿಗೆ ಲಸಿಕೆ

ಹನೂರು :ತಾಲೂಕಿನ ಸೂಳೆರಿಪಾಳ್ಯ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಪಚ್ಚೆ ದೊಡ್ಡಿ ಗ್ರಾಮದಲ್ಲಿ ಚರ್ಮಗಂಟು ರೋಗಕ್ಕೆ ಹಸು ಕರು ಬಲಿಯಾದ ನಂತರ ಎಚ್ಚೆತ ಪಶು ವೈದ್ಯಾಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ.

ಗುರುವಾರ ಪಚ್ಚೆ ದೊಡ್ಡಿ ಗ್ರಾಮದ ಮಾದೇಗೌಡ ಎಂಬವರಿಗೆ ಸೇರಿದ ಒಂದು ಹಸು ಮತ್ತು ಒಂದು ಕರು ಚರ್ಮಗಂಟು ರೋಗಕ್ಕೆ ಬಲಿಯಾಗಿತ್ತು. ಚರ್ಮ ಗಂಟು ರೋಗದ ಬಗ್ಗೆ ಹಲವಾರು ಬಾರಿ ಪಶು ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ತಿಳಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ, ಹಸು ಮತ್ತು ಕರು ಮೃತಪಟ್ಟ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಪಶು ಇಲಾಖೆಯ ಉಪನಿರ್ದೇಶಕ ಶಿವಣ್ಣರವರ ಮಾರ್ಗದರ್ಶನದಲ್ಲಿ ಮೂರು ಪಶು ವೈದ್ಯಾಧಿಕಾರಿಗಳು ಹಾಗೂ 12 ಹೆಲ್ತ್ ಇನ್ಸ್ಪೆಕ್ಟರ್ ಗಳು ಪಚ್ಚೆದೊಡ್ಡಿ ಹಾಗೂ ರಾಮಾಪುರ ಹೋಬಳಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಚರ್ಮಗಂಟು ಹೋಗ ನಿಯಂತ್ರಣಕ್ಕೆ ಚಿಕಿತ್ಸೆ ನೀಡಿದ್ದಾರೆ.

ಈಗಾಗಲೇ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಚರ್ಮ ಗಂಟು ನಿಯಂತ್ರಣಕ್ಕೆ ಚಿಕಿತ್ಸೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚಿಕಿತ್ಸೆ ನೀಡಿರುವುದರಿಂದ ಚರ್ಮ ಗಂಟು ರೋಗ ಜಿಲ್ಲೆಯಾದ್ಯಂತ ಕಡಿಮೆಯಾಗಿದೆ.

ಶಿವಣ್ಣ ಉಪನಿರ್ದೇಶಕ ಪಶುಪಾಲನ ಇಲಾಖೆ ಚಾ. ನಗರ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ