Mysore
27
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಚಾ.ನಗರ : 2 ವರ್ಷಗಳ ಬಳಿಕ ದಸರಾ ಆಚರಣೆಗೆ ಜಿಲ್ಲಾಡಳಿತ ಸಜ್ಜು

ಚಾಮರಾಜನಗರ : ಇದೇ ತಿಂಗಳ 27ರಿಂದ 30ರವರೆಗೆ ನಾಲ್ಕು ದಿನಗಳ ಕಾಲ ಜಿಲ್ಲಾ ದಸರಾಗೆ ಕ್ಷಣಗಣನೆ ಆರಂಭವಾಗಿದೆ.

ಎರಡು ವರ್ಷಗಳ ಬಳಿಕ ಅದ್ದೂರಿ ದಸರಾ ಆಚರಣೆ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜುಗೊಂಡಿದೆ. ಕಲಾತಂಡಗಳ ಮೆರವಣಿಗೆ, ರೈತ ದಸರ, ಮಹಿಳಾ ದಸರ, ಕವಿಗೋಷ್ಠಿ, ಪಲಪುಷ್ಪ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಸಂಭ್ರಮವನ್ನು ಹೆಚ್ಚಿಸಲಿದೆ.

ನಾಲ್ಕು ದಿನಗಳ ಕಾಲ ಪ್ರತಿ ದಿನ ಮಧ್ಯಾಹ್ನ 3:30 ರಿಂದ ರಾತ್ರಿ 10 ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳಿಗೆ ಮೂರು ಕಡೆಗಳಲ್ಲಿ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಚಾಮರಾಜೇಶ್ವರ ಸ್ವಾಮಿ  ದೇವಾಲಯದ ಆವರಣದಲ್ಲಿ ನಿರ್ಮಿಸಲಾಗುವ ಪ್ರಧಾನ ವೇದಿಕೆಯಲ್ಲಿ ಜೆಎಚ್ ಪಟೇಲ್ ಸಭಾಂಗಣದಲ್ಲಿ ಹಾಗೂ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಕಲಾವಿದರ ಗಾಯನ ಹಾಡು ನೃತ್ಯಗಳ ಜೊತೆಗೆ ಬೆಂಗಳೂರಿನಿಂದ ಬರುವ ವಿವಿಧ ಕಲಾವಿದರು ಪ್ರದರ್ಶನಗಳು ದಸರ ಸಂಭ್ರಮವನ್ನು ಕಳೆಕಟ್ಟಲಿವೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!