ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ
ಚಾಮರಾಜನಗರ: ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ವಿದ್ಯುತ್ ಪ್ರಸರಣ ನಿಗಮದ ನೌಕರರು ನಗರದ ಕ.ವಿ.ಪ್ರ.ನಿ.ನೌಕರರ ಸಂಸ್ಥೆಗಳ ಒಕ್ಕೂಟಗಳ ಕಚೇರಿ ಆವರಣದಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ವಿಭಿನ್ನವಾಗಿ ಪ್ರತಿಭಟಿಸಿದರು.
ರಕ್ತಕೊಟ್ಟೇವು.. ಪಿಂಚಣಿ ಬಿಡೇವು ಎಂಬ ಘೋಷಣೆಯೊಂದಿಗೆ ನಡೆದ ರಕ್ತದಾನ ಶಿಬಿರಕ್ಕೆ ರಕ್ತದಾನ ಮಾಡಿ ಚಾಲನೆ ನೀಡಿ ಮಾತನಾಡಿದ ಸೆಸ್ಕಾಂ ಇಇ ಆರ್.ವಸಂತಕುಮಾರ್ ಅವರು, ನೂತನ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಆದರಿಂದ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಎನ್‌ಪಿಎಸ್ ಯೋಜನೆ ವಿರೋಧಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಡಿ.೧೯ ರಂದು ಬೆಂಗಳೂರಿನ ಸ್ವಾತಂತ್ಯ ಉದ್ಯಾನವನದಲ್ಲಿ ಮಾಡು ಇಲ್ಲವೆ ಮಡಿ ಅನಿರ್ದಿಷ್ಠ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟವನ್ನು ಬೆಂಬಲಿಸಬೇಕಿದೆ ಎಂದರು.
ಲೆಕ್ಕಾಧಿಕಾರಿ ಭಾಸ್ಕರ್, ಸಂಘದ ಕಾರ್ಯದರ್ಶಿ ಎಸ್. ಸಿದ್ದರಾಜಪ್ಪ, ಎಂ.ಮಹದೆವಸ್ವಾಮಿ, ಕಾರ್ಯದರ್ಶಿ ಚೆನ್ನಂಜಕುಮಾರ್, ಶರಣಬಸಪ್ಪ ಚಿನ್ನಪುರ, ಸುನೀಲ್, ರಕ್ತದಾನ ಮಾಡಿದರು
ಪ್ರತಿಭಟನೆಯಲ್ಲಿ ಎನ್.ಮಹೇಶ್, ಮುರಳಿಕೃಷ್ಣಸ್ವಾಮಿ, ಎಸ್.ಮಂಜುನಾಥ್, ಮಹೇಶ್, ರಮೇಶ್, ನಾಗರಾಜು, ಶಿವಪ್ಪ, ಸಿ.ರಾಜು, ಸೋಮಶೇಖರ್, ಡಾ.ಮಹೇಶ್, ಮಂಜುನಾಥ್ ಇತರಿದ್ದರು.




