ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಇತ್ತೀಚೆಗೆ ಬೈಕ್ ವೀಲಿಂಗ್ ಮಾಡಿದ್ದ ಆರೋಪಿಗಳಿಬ್ಬರನ್ನು ಪಟ್ಟಣ ಠಾಣೆಯ ಪೊಲೀಸರು ಬಂಧಿಸಿ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಗಾಳಿಪುರ ಬಡಾವಣೆಯ ವಾಸಿ ಹಾಗೂ ಬೈಕ್ ವೀಲಿಂಗ್ ಮಾಡಿದ್ದ ಮಹಮ್ಮದ್ ಸುಹೇಲ್ ಮತ್ತು ಹಿಂಬದಿ ಸವಾರ ಮಹಮ್ಮದ್ ಉಸ್ಮಾನ್ ಎಂಬುವರನ್ನು ಬಂಧಿಸಿದ್ದಾರೆ.
ಅ.೪ ಮತ್ತು ೫ರ ನಡುವಿನ ರಾತ್ರಿ ೯ ರಿಂದ ೧೧.೩೦ರ ನಡುವಿನ ವೇಳೆಯಲ್ಲಿ ಇವರಿಬ್ಬರು ಜೋಡಿರಸ್ತೆಯಲ್ಲಿ ಬೈಕ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ವೀಲಿಂಗ್ ಮಾಡಿದ್ದರು.
ಈ ಮೂಲಕ ಸಾರ್ವಜನಿಕರಲ್ಲಿ ಭಯ ಉಂಟು ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಸಂಬAಧ ನಗರ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಅ.೧೪ ರಂದು ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದರು. ನಂತರ ಠಾಣೆಯ ಜಾಮೀನಿನ ಮೇಲೆ ಇಬ್ಬರನ್ನು ಬಿಡುಗಡೆ ಮಾಡಿದ್ದರು.





