Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಚಾ.ನಗರ : ವಿಶ್ವ ವಸತಿ ರಹಿತರ ದಿನಾಚರಣೆ

ಚಾಮರಾಜನಗರ: ನಗರದ ವಸತಿ ರಹಿತ ನಿರಾಶ್ರಿತರ ತಂಗುದಾಣದಲ್ಲಿ ವಿಶ್ವ ವಸತಿ ರಹಿತರ ದಿನಾಚರಣೆ ಆಚರಿಸಲಾಯಿತು. ಜಿಲ್ಲಾ ಕೌಶಲ್ಯಾಭಿವೃದ್ದಿ , ಉದ್ಯಮಶೀಲತೆ  ಮತ್ತು ಜೀವನೋಪಾಯ ಇಲಾಖೆ, ನಗರಸಭೆ,  ಹಾಗೂ ಮೂಡಲಧ್ವನಿ ವೃದ್ದಾಶ್ರಮ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ನಗರ ಯೋಜನಾ ನಿರ್ದೇಶಕ ಸುಧಾ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ನಾನಾ ಕಾರಣಗಳಿಂದ ವಯೋವೃದ್ದರು ವಸತಿ ರಹಿತರಾಗುತ್ತಾರೆ ಅಂತಹವರ ಆರೈಕೆಗಾಗಿ ನಗರಸಭೆ ಡೇ ನಲ್ಮ್ ಯೋಜನೆಯಡಿಯಲ್ಲಿ  ತೆರೆದಿರುವ ವಸತಿ ರಹಿತ ನಿರಾಶ್ರಿತರ ಆಶ್ರಯ ತಂಗುದಾಣದಲ್ಲಿ ವಯೋವೃದ್ದರಿಗೆ ಆಶ್ರಯ ನೀಡುವ  ಜೊತೆಗೆ ಅವರ ಸಂಪೂರ್ಣ ಯೋಗಕ್ಷೇಮ ನೋಡಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಉತ್ತಮ ನಿರ್ವಹಣೆಯ ಮೂಡಲಧ್ವನಿ ನಿರಾಶ್ರಿತರ ಕೇಂದ್ರವಾಗಿದ್ದು, ಇಲ್ಲಿಯ ವೃದ್ದರು ತಮ್ಮ ಆರೋಗ್ಯ ಕಡೆ ಹೆಚ್ಚು ಗಮನಕೊಡಬೇಕು  ಪ್ರತಿನಿತ್ಯ ಯೋಗ, ಧ್ಯಾನ ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಯೋಜನಾಧಿಕಾರಿ ವೆಂಕಟನಾಯಕ್, ಡಾ.ಉಮಾರಾಣಿ,  ಕೌಶಲ್ಯ ಇಲಾಖೆ ವ್ಯವಸ್ಥಾಪಕ ಡಾ.ಪುಟ್ಟಸ್ವಾಮಿ,  ಅಂಜಾದ್ ಪಾಷ, ಅನ್ಸರ್ ಖಾನ್, ನವೀನ್, ಮೂಡಲಧ್ವನಿ ವೃದ್ದಾಶ್ರಮದ ಅಧ್ಯಕ್ಷ ಶಂಕರ್ ಇತರರು ಹಾಜರಿದ್ದರು.
ಆರೋಗ್ಯತಪಾಸಣೆ:
ಇದೇ ಸಂದರ್ಭದಲ್ಲಿ ಆಶ್ರಮದ ವಯೋವೃದ್ದರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔ಼ಷದೋಪಚಾರ ಮಾಡಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ