ಮೈಸೂರು : ಕಾರು ಹರಿದು ಗಾಯಗೊಂಡಿರುವ ಮೂರಿಗೂ ಚಿಕಿತ್ಸೆ ಮುಂದುವರೆದಿದೆ. ರಾಹುಲ್ ಮತ್ತು ಆನಂದ್ ಇಬ್ಬರಲ್ಲೂ ಕೊಂಚ ಚೇತರಿಕೆ ಕಂಡು ಬಂದಿದ್ದು, ಪ್ರಜ್ವಲ್ ಅವರಿಗೂ ಸೋಮವಾರ ಸರ್ಜರಿ ಮಾಡಲು ಚಿಕಿತ್ಸೆ ನೀಡುತ್ತಿರುವ ವೈದ್ಯರು ನಿರ್ಧರಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇನ್ನು ಪ್ರಕರಣದ ಆರೋಪಿ ದರ್ಶನ್ ಅವರ ತಾಯಿಯೇ ಕಾರು ಹತ್ತಿಸಲು ಪ್ರಚೋದನೆ ನೀಡಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿ ಅದನ್ನು ಸೇರಿಸಿಲ್ಲ. ನಮ್ಮ ಮಕ್ಕಳ ನೀಡುವ ಹೇಳಿಯನ್ನೇ ಅವರು ಸರಿಯಾಗಿ ಪರಿಗಣಿಸುತ್ತಿಲ್ಲ ಎಂದು ಪ್ರಜ್ವಲ್ ತಂದೆ ಆಯೋಪಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ನಗರ ಪೊಲೀಸ ಆಯುಕ್ತ ರಮೇಶ್ ಬಾನೋತ್ ‘ ವೈದ್ಯರ ಸಮಕ್ಷಮದಲ್ಲಿಯೇ ಗಾಯಾಳುವಿನ ಹೇಳಿಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಈಗ ಅವರ ಕುಟುಂಬದವರು ಹೇಳಿಕೆ ನೀಡುತ್ತಿರು ರೀತಿಯಲ್ಲೂ ವಿಚಾರಣೆ ಮಾಡುತ್ತೇವೆ. ಎಲ್ಲ ಆಯಾಮದಲ್ಲೂ ವಿಚಾರಣೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.