ಮೈಸೂರು: ಹಿರಿಯ ಸಮಾಜವಾದಿ ಪ.ಮಲ್ಲೇಶ್ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆ ಸಂಬಂಧ ವಿಷಾಧಿಸಿದ್ದಾರೆ. ಹಾಗಾಗಿ ಈ ಹೋರಾಟವನ್ನು ಮುಂದುವರಿಸುವುದು ಬೇಡ ಎಲ್ಲರು ಸೌಹಾರ್ದತೆಯಾಗಿ ಹೋಗೋಣ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮ್ ಮನವಿ ಮಾಡಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ.ಮಲ್ಲೇಶ್ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆಯನ್ನು ನಾವು ಸಮರ್ಥನೆ ಮಾಡುತ್ತಿಲ್ಲ. ಈ ಬಗ್ಗೆ ಪ.ಮಲ್ಲೇಶ್ ಅವರು ಕೂಡ ವಿಷಾಧ ವ್ಯಕ್ತಪಡಿಸಿದ್ದಾರೆ. ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಆ ತಪ್ಪನ್ನು ಒಪ್ಪಿಕೊಂಡು ಸರಿಯಾಗಿ ನಡೆಯಬೇಕು. ಪ.ಮಲ್ಲೇಶ್ ಅವರು ಪೂರ್ವಕವಾಗಿ ಮಾತಾಡಿಲ್ಲ. ಹಾಗಾಗಿ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವಂತೆ ಕೋರಿದರು.
ಬ್ರಾಹ್ಮಣ್ಯದ ವಿರುದ್ಧವೇ ನಮ್ಮ ಹೋರಾಟವೇ ಹೊರತು ಬ್ರಾಹ್ಮಣ ಸಮುದಾಯದ ವಿರುದ್ಧವಲ್ಲ. ಇದನ್ನು ಸಮುದಾಯದ ಅರ್ಥ ಮಾಡಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರು ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮಹಿಳೆ ನೀರು ಕುಡಿದ ಕಾರಣಕ್ಕೆ ಗೋ ಮೂತ್ರದ ಮೂಲಕ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ. ಈ ಹೀನಾ ಕೃತ್ಯದ ಬಗ್ಗೆ ಯಾರೊಬ್ಬರು ಮಾತಾಡುತ್ತಿಲ್ಲ. ಈ ಪ್ರಕರಣಕ್ಕೆ ಹೊಣೆಯಾರು? ಮೇಲ್ವರ್ಗದ ಎಷ್ಟು ಜನ ಇದನ್ನು ಖಂಡಿಸಿದ್ದಾರೆ ಎಂದು ಪ್ರಶ್ನಿಸಿದರು.
ಶತ ಶತಮಾನದಿಂದ ಶೋಷಿತರು ಅನುಭವಿಸಿರುವ ಅಸ್ಪ್ತ್ಯೃಶ್ಯತೆ ನೋವನ್ನು ಬ್ರಾಹ್ಮಣ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ನನ್ನ ಈ ಮಾತು ಇಡೀ ಬ್ರಾಹ್ಮಣ ಸಮುದಾಯದಕ್ಕೆ ಅನ್ವಿಸುವುದಿಲ್ಲ. ಕಾರಣ ಅಲ್ಲಿಯ ಪ್ರಗತಿಪರವಾಗಿ ಅಲೋಚಿಸುವ ಅಸ್ಪೃಶ್ಯತೆಯನ್ನು ಖಂಡಿಸುವ ಮನಸ್ಸುಗಳಿವೆ? ಆದರೆ, ಅಲ್ಲಿನ ಕೆಲ ಪಟ್ಟಭದ್ರಹಿತಾಸಕ್ತಿಗಳು ಶೋಷಣೆಯನ್ನು ಮುಂದುವರಿಸುವೆ ಇವುಗಳನ್ನು ದೂಷಣೆ ಮಾಡುತ್ತೇವೆ ಎಂದರು.
ಪ.ಮಲ್ಲೇಶ್ ಅವರು ಸಮಾಜವಾದಿ ಹಿನ್ನೆಲೆಯ ಮೂಲಕ ಹಲವಾರು ಹೋರಾಟಗಳನ್ನು ಮಾಡಿರುವ ಹಿರಿಯ ಜೀವ. ಅವರು ತಮ್ಮ ತಪ್ಪಿಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಅಸ್ಪಶ್ಯತೆ ಆಚರಣೆಯನ್ನು ಖಂಡಿಸಿ ಬ್ರಾಹ್ಮಣ ಮತ್ತು ಮೇಲ್ವರ್ಗದ ಸಮುದಾಯಗಳು ಯಾಕೇ ಪ್ರತಿಭಟನೆ ಮಾಡುತ್ತಿಲ್ಲ. ನಿಮಗೆ ನೋವಾದರೆ ಮಾತ್ರ ನೋವೆ? ನಮ್ಮ ನೋವುಗಳು ನಿಮಗೆ ಕಾಣುವುದಿಲ್ಲವೇ ಅಥವಾ ಪರೋಷವಾಗಿ ಅಸ್ಪಶ್ಯತೆ ಆಚರಣೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದೀರಾ? ನಿಜವಾಗಿಯೂ ಹಿಂದೂ ಧರ್ಮದ ಬಗ್ಗೆ ಕಾಳಜಿ ಇದ್ದರೆ ಅಸ್ಪಶ್ಯತೆ ಆಚರಣೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿ ಎಂದು ಸವಾಲು ಹಾಕಿದರು.
ಹಿಂದೂ ಧರ್ಮದ ಬಗ್ಗೆ ನಮಗೂ ಕೀಳಿರಿಮೆ ಇಲ್ಲ. ಆದರೆ, ದೇವರು-ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚರಗಳನ್ನು ಹಿಂದೂ ಧರ್ಮದ ಸಂಸ್ಕೃತಿಯೆಂದು ಸಮರ್ಥನೆ ಮಾಡಿಕೊಳ್ಳುವ ಮನಸ್ಥಿತಿ ಮತ್ತು ಹಿಂದೂ ಧರ್ಮದಲ್ಲಿರುವ ಅಸಮಾನತೆಂ ವಿರುದ್ಧ ನಮ್ಮ ಹೋರಾಟ. ನಾವು ಇಡೀ ಬ್ರಾಹ್ಮಣ ಸಮುದಾದಂ ವಿರೋಧಿಗಳಲ್ಲ. ಪ್ರಸ್ತುತ ನಮಗೆ ಬೇಕಿರುವುದು ಶಾಂತಿ-ಸೌಹಾರ್ದತೆಂ ಸಮಾಜ. ಹೀಗಾಗಿ ಅಸಮಾನತೆಂನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಕೈ ಜೋಡಿಸಿ ಹೋರಾಟ ಮಾಡಿ ಎಂದು ಸವಾಲು ಹಾಕಿದರು.





