ಮೈಸೂರು: ಸರ್ಕಾರ ಸಗಟು ರೂಪದಲ್ಲಿ ಪುಸ್ತಕಗಳನ್ನು ಖರೀದಿ ವಾಡಿದರೂ ೨೦೧೯, ೨೦೨೦ರ ಅವಧಿಯಲ್ಲಿ ಖರೀದಿಸಿದ ಪುಸ್ತಕಗಳ ಹಣವನ್ನು ಬಿಡುಗಡೆ ವಾಡಿಲ್ಲ ಎಂದು ಸಂವಹನ ಪ್ರಕಾಶನದ ಪ್ರಕಾಶಕ ಡಿ.ಎನ್.ಲೋಕಪ್ಪ ಬೇಸರಿಸಿದರು.
ಶಿವರಾತ್ರಿ ರಾಜೇಂದ್ರ ಭವನದಲ್ಲಿ ಸಂವಹನ ಪ್ರಕಾಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾ ಕೂಟದ ಸಹೋಂಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕಗಳನ್ನು ಕೊಂಡು ಓದುವ ಸಂಪ್ರದಾುಂ ಕಡಿಮೆಾಂಗಿದೆ. ಮೊಬೈಲ್, ಲ್ಯಾಪ್‌ಟಾಪ್, ಇ-ಮೇಲ್ ಬಂದ ಮೇಲೆ ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗಿ ಪುಸ್ತಕಗಳ ವಾರಾಟವೂ ಕ್ಷೀಣಿಸಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಿ.ವಿ.ವಸಂತಕುವಾರ್ ಮಾತನಾಡಿ, ಕಲ್ಲಿನ ಒಳಗಡೆ ಇರುವ ಧ್ವನಿುಂ ಕಥೆುಂನ್ನು ವಾಗರ್ಥ ಕೃತಿಯು ಕಟ್ಟಿಕೊಡುತ್ತದೆ. ಡಿ.ಎ.ಶಂಕರ್ ಅವರು ವಿಮರ್ಶೆ ಮಾಡುವಾಗ ಯಾವುದೇ ಟೀಕೆಗೆ ಅಸ್ಪದ ಕೊಡದೆ ವಿಮರ್ಶೆ ಮಾಡಿದ್ದಾರೆ ಎಂದು ಹೇಳಿದರು.
ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಡಿ.ಎ.ಶಂಕರ್ ಅವರ ‘ವಾಗರ್ಥ’, ‘ಶರಣರ ಸುತ್ತ’ ಮತ್ತು ‘ಅಜ್ಜ ಪ್ರತ್ಯಕ್ಷ’ ಕೃತಿಗಳನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್.ಎಂ.ತಳವಾರ್ ವಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕಸಾಪ ಜಿಲ್ಲಾ ಕಾರ್ಯದರ್ಶಿ ಮ.ನ.ಲತಾ ಮೋಹನ್ ಹಾಜರಿದ್ದರು.





