Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬಿಜೆಪಿ ಟಿಕೆಟ್ ಆಕಾಂಕ್ಷಿ ಜನಧ್ವನಿ ಬಿ ವೆಂಕಟೇಶ್ ರಿಂದ ಬೃಹತ್ ಆರೋಗ್ಯ ತಪಸಣಾ ಶಿಬಿರ

ಹನೂರು :ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಜನಧ್ವನಿ ವೆಂಕಟೇಶ್ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ನಾಯಕರು, ಜನರ ಮನ ಗೆಲ್ಲಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಇಂದು ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪ ಸಮೀಪ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಿದ್ದು ಹಳ್ಳಿ-ಹಳ್ಳಿಗಳಿಂದ ಸಾವಿರಾರು ಜನರನ್ನು ಬಸ್ ಗಳಲ್ಲಿ ಕರೆತಂದು ತಪಾಸಣೆ ನಡೆಸಲಾಗುತ್ತಿದೆ‌.

ಕಣ್ಣಿನ ತಪಾಸಣೆ, ಕ್ಯಾನ್ಸರ್, ಬಿಪಿ, ಶುಗರ್, ಕಿಡ್ನಿ , ಹೋಮಿಯೋಪತಿ, ಆಯುರ್ವೇದ, ಮಕ್ಕಳ ವಿಭಾಗ ಸೇರಿದಂತೆ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದ್ದು 6-7 ಸಾವಿರಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಹನೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸರತಿ ಸಾಲೇ ಇದ್ದು ಪ್ರೀತಂ ನಾಗಪ್ಪ, ದತ್ತೇಶ್ ಕುಮಾರ್ ಹೀಗೆ ಪಟ್ಟಿ ಬೆಳೆಯುತ್ತಿದ್ದು ಎಲ್ಲರಿಗೂ ಠಕ್ಕರ್ ಕೊಡಲು ವೆಂಕಟೇಶ್ ಈ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಗಮನ ಸೆಳೆದಿದ್ದಾರೆ.

ಇನ್ನು, ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ವೇದಿಕೆ ಕಾರ್ಯಕ್ರಮಕ್ಕೆ ಒಬಿಸಿ ಮೋರ್ಚಾ ರಾಷ್ಟೀಯ ಅಧ್ಯಕ್ಷ ಲಕ್ಷ್ಮಣ್, ಉಪಾಧ್ಯಕ್ಷೆ ಅರುಣಾ,ರಾಜ್ಯಾಧ್ಯಕ್ಷ ನೆ ಲ ನರೇಂದ್ರಬಾಬು ಭಾಗಿಯಾಗಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ