Mysore
28
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ BJP ಮುಂದೆ ಇವರೇ ನಿಜವಾದ ದೇಶಪ್ರೇಮಿ ಎನ್ನುತ್ತಾರೆ ಎಂಬ ಆತಂಕ : ಎಚ್‌ಸಿಎಂ

ಬೆಂಗಳೂರು-ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ಬಿಜೆಪಿ ಮುಂದೆ ಭಯೋತ್ಪಾದಕರನ್ನು ಸೇರಿಸಿಕೊಂಡು ಇವರೇ ನೋಡಿ ನಮ್ಮ ದೇಶದ ನಿಜವಾದ ರಾಷ್ಟ್ರಪ್ರೇಮಿಗಳೆಂದು ಹೇಳಬಹುದು ಎಂಬ ಆತಂಕವನ್ನು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಅವರು, 30-40 ಕೊಲೆ ಮಾಡಿರುವಂತಹ ರೌಡಿಗಳನ್ನು ಚುನಾವಣೆ ಹೊತ್ತಿನಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಏನೇನೋ ಸಮರ್ಥನೆ ನೀಡುತ್ತಾರೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಇಸ್ಲಾಮಾಬಾದ್‍ನಲ್ಲಿ ನಮ್ಮ ಧ್ವಜ ಹಾರಿಸುತ್ತೇವೆ ಎಂದು ಪದೇ ಪದೇ ಹೇಳುವುದನ್ನು ನೋಡಿದರೆ ಮುಂದೊಂದು ದಿನ ಭಯೋತ್ಪಾದಕರನ್ನು ಸೇರಿಸಿಕೊಂಡು ದೇಶಪ್ರೇಮಿಗಳೆಂದು ಬಿಂಬಿಸಬಹುದೇನೋ ಎಂಬ ಅನುಮಾನ ಕಾಡುತ್ತಿದೆ ಎಂದಿದ್ದಾರೆ.
ದೇಶಕ್ಕೆ ಮೊದಲ ಭಯೋತ್ಪಾದಕನನ್ನು ನೀಡಿದ ಗೋಡ್ಸೆ ಸಂತತಿಯವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಮುಂದಿನ ರೌಡಿಗಳೇ ಮುಂದಿನ ಬಿಜೆಪಿ ಮುಖಂಡರು ಎಂಬುದು ವಾಸ್ತವ ಎಂದು ಲೇವಡಿ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ