ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ಹಂಗಳ ರಸ್ತೆಯ ಐಟಿಐ ಕಾಲೇಜಿನ ಸಮೀಪ ರಾತ್ರಿ 7.30 ರ ಸಮಯದಲ್ಲಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ನಡೆದಿದೆ.
ತಾಲ್ಲೂಕಿನ ಜಕ್ಕಳ್ಳಿ ಗ್ರಾಮದ ಚಂದ್ರಪ್ಪ( 38) ಹಾಗೂ ಲಕ್ಕೂರು ಗ್ರಾಮದ ಅನಿಲ್ (28) ಸ್ಥಳದಲ್ಲಿಯೇ ಮೃತಪಟ್ಟರೆ ಹಿಂಬದಿ ಸವಾರ ಪ್ಣದ ವೇಣು ಎಂಬತನಿಗೆ ಗಾಯಗಳಾಗಿದೆ.
ಸ್ಥಳಕ್ಕೆ ಪಟ್ಟಣ ಪೊಲೀಸರು ಬಂದು ಮೃತ ದೇಹಗಳನ್ನು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.





