ಸುತ್ತೂರು: ನಂಜನಗೂಡು ತಾಲೂಕು ಹದಿನಾರು ಗ್ರಾಮದ. ಬಿಳಿಕೆರೆ ಮಾದಪ್ಪ ದೇವಸ್ಥಾನದ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಈ ರಥೋತ್ಸವಕ್ಕೆ ಹದಿನಾರು ಸುತ್ತಮುತ್ತ ಸುಮಾರು 20ರಿಂದ 25 ಗ್ರಾಮಗಳ ಭಕ್ತರು ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿಯಾಗಿದ್ದರು.
ಈ ಜಾತ್ರೆ ಕಳೆದ ಎರಡು ವರ್ಷದಿಂದ ಕರೋನ ಮಹಾಮಾರಿಯಿಂದ ಗ್ರಾಮಸ್ಥರು ಸರಳವಾಗಿ ಆಚರಿಸಿಕೊಂಡು ಬರುತ್ತಿದ್ದರು ಆದರೆ ಈ ಬಾರಿ ಕರೋನ ಮುಕ್ತವಾಗಿರುವುದರಿಂದ 2 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿಯಾಗಿರುವುದು ವಿಶೇಷವಾಗಿತ್ತು ಈ ಒಂದು ಜಾತ್ರೆಗೆ ಆಗಮಿಸಿದ ಎಲ್ಲ ಭಕ್ತರಿಗೂ ಶ್ರೀ ಮಹದೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಅನ್ನ ಸಂದಾರ್ಪಣೆ ಏರ್ಪಡಿಸಲಾಗಿತ್ತು.
ಈ ಒಂದು ರಥೋತ್ಸವ ಸಮಾರಂಭಕ್ಕೆ ಮಾಜಿ ಲೋಕೋಪಿಯಾಗಿ ಸಚಿವರಾದ ಡಾಕ್ಟರ ಹೆಚ್ ಸಿ ಮಹದೇವಪ್ಪ. ಗ್ರಾಮದ ಮುಖಂಡರಾದ ಗೌಡ್ರ್ ಶಿವಪ್ಪ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಭಿ. ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ದೇವನೂರು ಬುಲೆಟ್ ಮಹಾದೇವಪ್ಪ. ಜಿಲ್ಲಾ ಪಂಚಾಯಿತಿ ಸದಸ್ಯರಾದ. ಸದಾನಂದ. ಗುರುಸ್ವಾಮಿ. ಹದಿನಾರು ಹಾಗೂ ಸುತ್ತಮುತ್ತ ಗ್ರಾಮಗಳ ಮುಖಂಡರು ಹಾಜರಿದ್ದರು .