ಮೈಸೂರು: ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಬಿ.ರಮೇಶ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಡಾ.ಚಂದ್ರಗುಪ್ತ ಅವ ವರ್ಗಾವಣೆ ಮಾಡಿ ಈ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು.
ಮಂಗಳವಾರ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ ಆಯುಕ್ತರ ಕಚೇರಿಯಲ್ಲಿ ವಿದ್ಯುಕ್ತವಾಗಿ ಸ್ವೀಕರಿಸಿದರು. ಡಾ.ಚಂದ್ರಗುಪ್ತ ಅಧಿಕಾರ ಹಸ್ತಾಂತರ ಮಾಡಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಸಿಐಡಿ ಎಸ್ಪಿಯಾಗಿದ್ದ ಬಿ.ರಮೇಶ್ ಅವರನ್ನು ನಿನ್ನೆ ಸಂಜೆಯಷ್ಟೇ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.
ಬಿ. ರಮೇಶ್ ಅವರು ಆಂಧ್ರ ಪ್ರದೇಶದ ಮೂಲದವರಾಗಿದ್ದು ಬಿ.ಟೆಕ್ ಪದವಿ ಪದೆದಿದ್ದಾರೆ. 31.08.2009 ರಲ್ಲಿ ನೇರವಾಗಿ ಬೆಂಗಳೂರು ನಗರದ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡವರು. ನಂತರ 31.08.09ರಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ – 2 ಎಕ್ಸ್-ಕೇಡರ್ ಹುದ್ದೆಗೆ ನೇಮಕವಾಗಿದ್ದರು. ಇವರು ರಾಮನಗರ, ಬೆಂಗಳೂರು ನಗರದಲ್ಲಿ ಸೇವೆ ಸಲ್ಲಿಸಿ ಅನೇಕ ಉನ್ನತ ಕಾರ್ಯಗಳನ್ನು ನಿರ್ವಹಿಸಿದ್ದಾರೆ