Mysore
17
broken clouds

Social Media

ಶನಿವಾರ, 31 ಜನವರಿ 2026
Light
Dark

ಸಾಧ್ಯವಿಲ್ಲಾ ಎಂಬುದನ್ನು ಸಾಧಿಸಿ ತೋರಿಸುವ ಕೀರ್ತಿ ಆಯುರ್ವೇದ ಚಿಕಿತ್ಸೆಗಿದೆ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಆರ್ಯುದೇವದಕ್ಕೆ ತನ್ನದೆ ಆದ ವಿಶೇಷ ಶಕ್ತಿ ಇದೆ. ಪುರಾತನ ಕಾಲದಲ್ಲಿ ಆರ್ಯುವೇದ ಬಳಸಿಕೊಂಡು ಚಿಕಿತ್ಸೆ ಪಡೆದು ಸಾಧ್ಯ ಇಲ್ಲ ಎಂಬುದನ್ನು ಸಾಧಿಸಿರುವ ಕೀರ್ತಿ ಆಯುರ್ವೇದಕ್ಕೆ ಇದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಆಯುಷ್ ಇಲಾಖೆಯು ಚಾಮುಂಡೇಶ್ವರಿ ಕ್ಷೇತ್ರದ ಲಿಂಗಾಂಬುದಿಪಾಳ್ಯ ಗ್ರಾಮದಲ್ಲಿ ಏರ್ಪಡಿಸಿದ್ದ “ಆಯುಷ್ ಸೇವಾ ಗ್ರಾಮ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಯುರ್ವೇದವು ಭಾರತದ ವೈದ್ಯ ಪದ್ದತಿಯಾಗಿದ್ದು, ಇಂದು ವಿಶ್ವಮನ್ನಣೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

ಆರ್ಯುವೇದವು ನಮ್ಮ ದೇಹದ ಪಂಚೇಂದ್ರಿಯಗಳನ್ನು ನಿಯಂತ್ರಿಸುತ್ತದೆ. ಆರ್ಯುವೇದವನ್ನು ನಾವು ಚಿಕಿತ್ಸೆಗಿಂತ ಮುಖ್ಯವಾಗಿ ಬದುಕಿನ ಭಾಗ ಎಂಬುದಾಗಿ ಪರಿಗಣಿಸಬೇಕಾಗಿದೆ.

ಮುಂದಿನ ಪೀಳಿಗೆಗೆ ಈ ಪದ್ದತಿಯನ್ನು ತಲುಪಿಸುವ ಕಾರ್ಯ ಮಾಡಬೇಕು. ಆರ್ಯುವೇದ ಪದ್ದತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರ ನಿಯಮಗಳನ್ನು ಬದುಕಿನಲ್ಲಿ ಪಾಲಿಸಬೇಕು. ಇದರಿಂದ ಆತ್ಮಸ್ತೈರ್ಯ ವೃದ್ಧಿಯಾಗಿ ಗುಣಾತ್ಮಕ ಯೋಚನೆ ಮೂಡುತ್ತದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!