ಸೋಮವಾರಪೇಟೆ: ತಾಲ್ಲೂಕಿನ ಹಾನಗಲ್ಲು ಗ್ರಾಮ ನಿವಾಸಿ, ಕೆ.ಎಸ್.ಆರ್.ಪಿ. ಸಹಾಯಕ ಸಬ್‌ಇನ್ಸ್ಪೆಕ್ಟರ್‌ರೋರ್ವರು ಹೃದಯಾಘಾತದಿಂದ ಗುರುವಾರ ರಾತ್ರಿ ಹಾಸನದಲ್ಲಿ ಮೃತಪಟ್ಟಿದ್ದಾರೆ.
ಗ್ರಾಮದ ನಿವಾಸಿ ಎಚ್.ಎಂ.ಆನಂದ್(೫೮) ಮೃತಪಟ್ಟವರು. ಕೆಎಸ್‌ಆರ್‌ಪಿ ೧೧ನೇ ಬೆಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ ೧೦ಗಂಟೆಗೆ ವಸತಿ ಗೃಹದಲ್ಲಿ ಹೃದಯಾಘಾತವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ಧಾರೆ.
೧೯೯೨ರಲ್ಲಿ ಕೆ.ಎಸ್.ಆರ್.ಪಿ. ಸೇರ್ಪಡೆಗೊಂಡು, ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯ ಎಸ್‌ಟಿಎಫ್‌ನಲ್ಲಿ ೫ ವರ್ಷ ಸೇವೆ ಸಲ್ಲಿಸಿದ್ದರು. ಮೈಸೂರು, ಮಂಗಳೂರಿನಲ್ಲಿ ಸೇವೆ ಸಲ್ಲಿಸಿ ಇದೀಗ ಹಾಸನದಲ್ಲಿ ಕರ್ತವ್ಯದಲ್ಲಿದ್ದರು.
ಶುಕ್ರವಾರ ಸಂಜೆ ಹಾನಗಲ್‌ನ ರುದ್ರಭೂಮಿಯಲ್ಲಿ ಕೆಎಸ್‌ಆರ್‌ಪಿ ತುಕಡಿ ವತಿಯಿಂದ ಗೌರವ ವಂದನೆ ಸಲ್ಲಿಸಿ, ಕುಶಲತೋಪು ಹಾರಿಸಲಾಯಿತು. ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್, ಕೆಎಸ್‌ಆರ್‌ಪಿಯ ಆರ್‌ಪಿಐ ವಸಂತ್ ಕುಮಾರ್, ಎಆರ್‌ಎಸ್‌ಐ ಲಕ್ಷö್ಮಣ, ಈಶ್ವರಪ್ಪ ಅಂತಿಮ ನಮನ ಸಲ್ಲಿಸಿದರು. ನಂತರ ಅಂತಿಮ ಸಂಸ್ಕಾರ ನಡೆಯಿತು.
ಮೃತರು ತಾಯಿ ಲೀಲಾವತಿ, ಪತ್ನಿ ಸುಮಿತ್ರ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.





