ಮೈಸೂರು : ರಾಮನ ಮೂರ್ತಿ ಕೆತ್ತನೆ ಮಾಡಿರುವ ಮೈಸೂರಿನ ಹೆಸರಾಂತ ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬಕ್ಕೆ ನಗರದ ಹೆಸರಾಂತ ಸಿಹಿತಿಂಡಿ ಮಳಿಗೆ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಸನ್ಮಾನಿಸಿ, ವಿಶೇಷವಾಗಿ ತಯಾರಿಸಿರುವ ʼಸಿಹಿʼರಾಮ ಮಂದಿರ ಪ್ರತಿಕೃತಿಯ ನ್ನು ನೀಡಿದ್ದಾರೆ.
ಇನ್ನು ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮಮಂದಿರವನ್ನು ಅದ್ದೂರಿಯಾಗಿ ಉದ್ಘಾಟನೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಇದೇ ವೇಳೆ ರಾಮ ಮಂದಿರದ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಮ್ ಲಲ್ಲಾ ವಿಗ್ರಹವನ್ನು ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಲಾಗಿದೆ.
ಕಾರ್ಯಕ್ರಮಕ್ಕೂ ಮುನ್ನ ಮೈಸೂರಿನ ವಿದ್ಯಾರಣ್ಯಪುರಂನ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಮಳಿಗೆಯವರು, ಅರುಣ್ ಯೋಗಿರಾಜ್ ಮತ್ತು ಅವರ ಕುಟುಂಬಕ್ಕೆ ವಿವಿಧ ಸಿಹಿ ತಿನಿಸುಗಳಿಂದ ತಯಾರಿಸಿದ ರಾಮಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.
ಸುಮಾರು ೮ ರೀತಿಯ ಸಿಹಿತಿಂಡಿ ಬಳಕೆ: ಅಂಜೂರ, ಬಾದಾಮಿ, ಖಜೂ, ಡ್ರೈ ಫ್ರೂಟ್ಸ್ ಬಳಸಿ ಸುಮಾರು ೮ರಿಂದ ೧೦ದಿನದಲ್ಲಿ ರಾಮ ಮಂದಿರ ಪ್ರತಿಕೃತಿಯನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ತಯಾರಿಸು ೧೫ ಮಂದಿ ಶ್ರಮಿಸಿದ್ದಾರೆ.
ಈ ಸಿಹಿ ರಾಮ ಮಂದಿರವನ್ನು ಶಿಲ್ಪಿ ಅರುಣ್ ಯೋಗಿರಾಜ್ ಹಾಗೂ ಕುಟುಂಬದವರಿಗೆ ಅರ್ಪಿಸಲಾಗಿದೆ.





