ಗುಂಡ್ಲುಪೇಟೆ: ತಾಲೂಕಿನ ಬೇಗೂರು ಸಮೀಪದ ಮರಳಾಪುರ ಗ್ರಾಮದ ವೀರಪ್ಪ ಎಂಬುವರ ತೋಟದ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿದ ಪ್ರಸಂಗ ನಡೆದಿದೆ.
ಗ್ರಾಮದ ಸಮೀಪವೇ ಇರುವ ವೀರಪ್ಪ ಎಂಬುವರ ತೋಟದ ಮನೆಗೆ ಸುಮಾರು ರಾತ್ರಿ 10.30 ವೇಳೆಗೆ ಚಿರತೆ ಒಂದು ದಾಳಿ ನಡೆಸಿ ಚಿಕ್ಕ ಕರುವೊಂದನ್ನು ಕಚ್ಚಿ ಎಳೆದೋಯುವ ವೇಳೆ
ಜಾನುವಾರುಗಳು ಹಾಗೂ ನಾಯಿಗಳ ಸದ್ದಿಗೆ ಎಚ್ಚರಗೊಂಡ ಮಾಲೀಕ ಹಾಗೂ ಮಲ್ಲೇಶ್ ಎಂಬುವರು ಲೈಟ್ ಹಾಕಿ ಕಿರುಚಿ ಸದ್ದು ಮಾಡಿದಾಗ ಚಿರತೆ ಗಾಬರಿಯಿಂದ ಕರುವನ್ನು ಹಲ್ಲೆ ಬಿಟ್ಟು ಕಾಲ್ ಕಿತ್ತಿದೆ..