ಯಳಂದೂರು: ತಾಲೂಕಿನ ಕಂದಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಪಶು ಆಹಾರ ಸೇವಿಸಿ 4 ಜಾನುವಾರು ಮೃತಪಟ್ಟಿವೆ.
ಪಟ್ಟಣದ ಅಂಗಡಿ ಯೊಂದರಲ್ಲಿ ತಂದಿದ್ದ ವೀಟ್ ಬ್ರಾನ್ ಪ್ಲೇಕ್ಸ್ ಹೆಸರಿನ ಆಹಾರವನ್ನು ಜಾನುವಾರುಗಳಿಗೆ ನೀಡಿದ್ದೆವು. ಹಸು
ಮತ್ತು ಎತ್ತುಗಳು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಹೊರಳಾಡಿ
ಅಸು ನೀಗಿದವು. ಪಶು ಸಾಕಣೆಯಿಂದ ಜೀವನ ಕಟ್ಟಿಕೊಂಡಿದ್ದ
ಕುಟುಂಬಕ್ಕೆ ಲಕ್ಷಾಂತರ ನಷ್ಟವಾಗಿದೆ’ ಎಂದು ಮಾಲೀಕ ಬಸವಣ್ಣ ಅವರು ಅಳಲು ತೋಡಿಕೊಂಡರು.ಈ ಬಗ್ಗೆ ಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದು, ಆಹಾರ ಪೂರೈಕೆ ಮಾಡಿದ ಅಂಗಡಿಯ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಅವಧಿ ಮೀರಿದ ಪಶು ಆಹಾರ ಸೇವಿಸಿ 4 ರಾಸುಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಶಾಸಕ ಎನ್. ಮಹೇಶ್, ಚಾಮುಲ್ ಅಧ್ಯಕ್ಷ ವೈ.ಎನ್. ನಾಗೇಂದ್ರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಸುಗಂಧರಾಜ್, ಡಾ. ಶಿವರಾಜು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.





