ಹನೂರು: ಪಟ್ಟಣದ ಬಂಡಳ್ಳಿ ರಸ್ತೆಯ ಬೃಹತ್ ಗಾತ್ರದ ಮರವನ್ನು ಬೆಳ್ಳಂಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ .
ಪಟ್ಟಣದ ಅಮ್ಮನ್ ಮೆಡಿಕಲ್ ಮುಂಭಾಗದಲ್ಲಿನ ಬೃಹತ್ ಗಾತ್ರದ ಮರವೊಂದು ಸತತ ಬೀಳುತ್ತಿರುವ ಮಳೆಗೆ ರಸ್ತೆಗೆ ವಾಲಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿತು.
ಈ ರಸ್ತೆಯಲ್ಲಿ ಪ್ರತಿಷ್ಠಿತ ಕ್ರಿಸ್ತರಾಜ ವಿದ್ಯಾಸಂಸ್ಥೆ ಮತ್ತು ಸ್ಟೇಟ್ ಬ್ಯಾಂಕ್ ,ಮಣಪ್ಪುರಂ ಫೈನಾನ್ಸ್ ಕೋಟಕ್ ಮಹೀಂದ್ರ ಬ್ಯಾಂಕ್ ಸೇರಿದಂತೆ ಹತ್ತಾರು ಕಚೇರಿಗಳು ಹಾಗೂ ಖಾಸಗಿ ಆಸ್ಪತ್ರೆ ಇದ್ದ ಹಿನ್ನೆಲೆ ಸಾವಿರಾರು ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಹಕರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರು.
ಈ ಬಗ್ಗೆ “ಆಂದೋಲನ ಪತ್ರಿಕೆಯಲ್ಲಿ ಮರ ತೆರವುಗೊಳಿಸುವಂತೆ ಆಗ್ರಹ” ಎಂಬ ಶೀರ್ಷಿಕೆಯಡಿ ಅಕ್ಟೋಬರ್ 18 ರಂದು ವರದಿ ಪ್ರಕಟವಾಗಿತ್ತು ವರದಿಗೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ.
ಆಂದೋಲನ ಟಿವಿ ಗೆ ಮೆಚ್ಚುಗೆ : ಬಂಡಳ್ಳಿ ರಸ್ತೆಯಲ್ಲಿ ಸತತ ಬೀಳುತ್ತಿರುವ ಮಳೆಗೆ ವಾಲಿಕೊಂಡಿರುವ ಮರ ತೆರವುಗೊಳಿಸುವಂತೆ ಅ 17ರಂದು ಆಂದೋಲನ ಟಿವಿ ಯಲ್ಲಿ ವರದಿ ಪ್ರಸಾರವಾಗಿತ್ತು.ವರದಿ ಪ್ರಕಟವಾದ ಮರುದಿನವೇ ಮರ ತೆರವುಗೊಳಿಸುತ್ತಿರುವುದರಿಂದ ಸಾರ್ವಜನಿಕರು ಆಂದೋಲನ ಟಿವಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.