ದೆಹಲಿಯಲ್ಲಿ ನಡೆದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್
ಯಳಂದೂರು: ವಾಕೊ ಇಂಡಿಯಾ ಸಂಸ್ಥೆಯಿAದ ದೆಹಲಿಯ ತಲ್ಕಟ್ಟೋರ ಇಂದೋರ್ ಸ್ಟೇಡಿಯಂನಲ್ಲಿ ನಡೆದ ೨ನೇ ಅಂತಾರಾಷ್ಟಿಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತಾಲ್ಲೂಕಿನ ಅಗರ ಗ್ರಾಮದ ಇಬ್ಬರು ಚಿನ್ನ, ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ನ.೨ ರಿಂದ ೬ ರವರೆಗೆ ನಡೆದ ಕಿಕ್ ಬಾಕ್ಸಿಂಗ್‌ನ ಕ್ರಿಯೇಟಿವ್ ಧಾಂ ವೆಪನ್ಸ್ ವಿಭಾಗದಲ್ಲಿ ಎನ್.ಅಂಬರೀಷ್ ಚಿನ್ನದ ಪದಕ ಮತ್ತು ಕಿಕ್‌ಲೈಟ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಕೊಂಡಿದ್ದಾರೆ.
ಎಸ್.ಯೋಗೇಶ್ ಮ್ಯೂಸಿಕಲ್ ಫಾಂ ವೆಪನ್ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಕ್ರಿಯೇಟಿವ್ ಫಾಂ ಓಪನ್ ಹ್ಯಾಂಡ್ ವಿಭಾಗದಲ್ಲಿ ೧ ಕಂಚಿನ ಪದಕವನ್ನು ಗಳಿಸಿದ್ದಾರೆ. ತರಬೇತುದಾರ ಡಿ.ಚಂದ್ರು ಪದಕ ವಿಜೇತರನ್ನು ಪ್ರಶಂಶಿಸಿದ್ದಾರೆ.





